• Feb 14, 2026
  • NPN Log
    India vs Pakistan T20 World Cup Boycott: 2026ರ ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧದ ಪಂದ್ಯವನ್ನು ಪಾಕಿಸ್ತಾನ ಬಹಿಷ್ಕರಿಸಿರುವ ನಿರ್ಧಾರದಿಂದ ಕ್ರಿಕೆಟ್ ಅಭಿಮಾನಿಗಳಲ್ಲಿ ನಿರಾಸೆ ಮೂಡಿದೆ. ಐಸಿಸಿ ಮತ್ತು ಎರಡೂ ಮಂಡಳಿಗಳಿಗೆ ನಷ್ಟವಾಗುವ ಸಾಧ್ಯತೆಯಿದ್ದು, ಪಾಕ್ ತನ್ನ ನಿರ್ಧಾರ ಮರುಪರಿಶೀಲಿಸುವಂತೆ ಐಸಿಸಿ ಸೂಚಿಸಿದೆ. ಆದರೂ ಪಾಕಿಸ್ತಾನದ ಪ್ರಧಾನಿ ನಿರ್ಧಾರವನ್ನು ಸಮರ್ಥಿಸಿದ್ದಾರೆ. ಈ ಬಗ್ಗೆ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಅಚ್ಚರಿ ಹೇಳಿಕೆ ನೀಡಿದ್ದು, ತಾವು ಆಡಲು ಸಿದ್ಧರಿದ್ದೇವೆ ಎಂದಿದ್ದಾರೆ. 2026 ರ ಟಿ20 ವಿಶ್ವಕಪ್ (T20 World Cup) ಆರಂಭಕ್ಕೂ ಮುನ್ನ ಪಾಕಿಸ್ತಾನ ತಂಡ, ಟೀಂ ಇಂಡಿಯಾ (India vs Pakistan) ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಉಭಯ ತಂಡಗಳ ನಡುವಿನ ಈ ಪಂದ್ಯ ರದ್ದಾದರೆ ಐಸಿಸಿ ಜೊತೆಗೆ ಬಿಸಿಸಿಐ ಹಾಗೂ ಪಿಸಿಬಿಗೂ ನಷ್ಟವುಂಟಾಗಲಿದೆ. ಹೀಗಾಗಿ ಐಸಿಸಿ, ಪಾಕ್ ತಂಡ ತನ್ನ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಸೂಚಿಸಿದೆ. ಆದಾಗ್ಯೂ ಇಂದು ಈ ಬಗ್ಗೆ ಸ್ಪಷ್ಟನೆ ನೀಡಿರುವ ಪಾಕಿಸ್ತಾನದ ಪ್ರಧಾನಿ ನಾವು ನಿಮ್ಮ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ ಎಂದಿದ್ದಾರೆ. ಇದೆಲ್ಲದರ ನಡುವೆ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ (SuryaKumar Yadav), ಪಾಕಿಸ್ತಾನದ ನಿರ್ಧಾರದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಟೀಂ ಇಂಡಿಯಾ ವಿರುದ್ಧದ ಪಂದ್ಯವನ್ನು ಪಾಕಿಸ್ತಾನ ಬಹಿಷ್ಕರಿಸಿರುವ ಬಗ್ಗೆ ಮಾತನಾಡಿರುವ ಸೂರ್ಯ, ‘ಪಾಕಿಸ್ತಾನ ನಮ್ಮ ವಿರುದ್ಧ ಪಂದ್ಯ ಆಡದಿರಲು ನಿರ್ಧರಿಸಿದೆ. ಪಾಕಿಸ್ತಾನದ ನಿರ್ಧಾರಗಳು ನಮ್ಮ ನಿಯಂತ್ರಣದಲ್ಲಿಲ್ಲ. ಆದರೆ ನಾವು ಪಾಕಿಸ್ತಾನದ ವಿರುದ್ಧ ಆಡಲು ನಿರಾಕರಿಸಿಲ್ಲ, ಅವರು ಆಡಲು ನಿರಾಕರಿಸಿದ್ದಾರೆ. ಐಸಿಸಿ ವೇಳಾಪಟ್ಟಿಯ ಪ್ರಕಾರ ನಾವು ಆಡಲು ಸಿದ್ಧರಿದ್ದೇವೆ. ನಮ್ಮ ಟಿಕೆಟ್‌ಗಳು ಸಹ ಬುಕ್ ಆಗಿವೆ. ಮೊದಲು ನಾವು ಮುಂಬೈನಲ್ಲಿ ಅಮೆರಿಕ ವಿರುದ್ಧ ಮತ್ತು ನಂತರ ದೆಹಲಿಯಲ್ಲಿ ಕೆನಡಾ ವಿರುದ್ಧ ಆಡುತ್ತೇವೆ. ಈ ಎರಡು ಪಂದ್ಯಗಳ ನಂತರ, ನಾವು ದೆಹಲಿಯಿಂದ ಕೊಲಂಬೊಗೆ ಹೊರಡುತ್ತಿದ್ದೇವೆ. ನಮ್ಮ ತಂಡ ಪಾಕಿಸ್ತಾನದ ವಿರುದ್ಧ ಉತ್ತಮವಾಗಿ ಆಡಿದೆ ಮತ್ತು ಭವಿಷ್ಯದಲ್ಲಿಯೂ ಅದಕ್ಕಾಗಿ ಶ್ರಮಿಸುವುದನ್ನು ಮುಂದುವರಿಸುತ್ತದೆ. ನಾವು ಏಷ್ಯಾಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಮೂರು ಬಾರಿ ಆಡಿದ್ದೇವೆ ಮತ್ತು ನಾವು ಮೂರು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇವೆ. ನಮಗೆ ಮತ್ತೆ ಆಡಲು ಅವಕಾಶ ಸಿಕ್ಕರೆ, ನಾವು ಆಡುತ್ತೇವೆ ಮತ್ತು ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ. ವಾಸ್ತವವಾಗಿ, ಫೆಬ್ರವರಿ 15 ರಂದು ಕೊಲಂಬೊದಲ್ಲಿ ನಡೆಯಬೇಕಿದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಪಾಕಿಸ್ತಾನ ಸರ್ಕಾರ ಬಹಿಷ್ಕರಿಸುವುದಾಗಿ ಘೋಷಿಸಿದೆ. ಈ ಘೋಷಣೆ ಪಿಸಿಬಿಯಿಂದ ಬಂದಿಲ್ಲ, ಬದಲಾಗಿ ಪಾಕಿಸ್ತಾನ ಸರ್ಕಾರದಿಂದ ಬಂದಿದೆ. ಪಾಕ್ ಸರ್ಕಾರ ಪತ್ರಿಕಾ ಪ್ರಕಟಣೆ ನೀಡುವ ಮೂಲಕ ಇದನ್ನು ಘೋಷಿಸಿದೆ. ಆದಾಗ್ಯೂ, ಪಿಸಿಬಿಯಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ಐಸಿಸಿ ಹೇಳಿತ್ತು. ಅಲ್ಲದೆ ಭಾರತದ ವಿರುದ್ಧದ ಟಿ20 ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸಿದ್ದಕ್ಕೆ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಸಮರ್ಥನೆ ನೀಡಿದ್ದಾರೆ. ‘ಟಿ20 ವಿಶ್ವಕಪ್‌ಗೆ ಸಂಬಂಧಿಸಿದಂತೆ ನಾವು ಭಾರತದ ವಿರುದ್ಧ ಆಡುವುದಿಲ್ಲ ಎಂಬ ಸ್ಪಷ್ಟ ನಿಲುವನ್ನು ತೆಗೆದುಕೊಂಡಿದ್ದೇವೆ. ಏಕೆಂದರೆ ಆಟದ ಮೈದಾನದಲ್ಲಿ ಯಾವುದೇ ರಾಜಕೀಯ ಇರಬಾರದು. ನಾವು ಬಾಂಗ್ಲಾದೇಶದೊಂದಿಗೆ ಸಂಪೂರ್ಣವಾಗಿ ನಿಲ್ಲಬೇಕು ಮತ್ತು ಇದು ತುಂಬಾ ಸರಿಯಾದ ನಿರ್ಧಾರ ಎಂದು ನಾನು ಭಾವಿಸುತ್ತೇನೆ. ನಾವು ಬಾಂಗ್ಲಾದೇಶದೊಂದಿಗೆ ನಿಲ್ಲುತ್ತೇವೆ’ ಎಂದಿದ್ದಾರೆ.

    You Might Also Like

    Comments

    Leave A Comment

    Don’t worry ! Your email address will not be published. Required fields are marked (*).

    Get Newsletter

    Featured News

    Advertisement

    Voting Poll (Checkbox)

    Voting Poll (Radio)

    Readers Opinion