• Feb 14, 2026
  • NPN Log
    ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಫ್ಲೋರಿಡಾದ ಗಾಲ್ಫ್ ಕ್ಲಬ್‌ನಲ್ಲಿ ಹತ್ಯೆ ಮಾಡಲು ಯತ್ನಿಸಿದ ಆರೋಪಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ರಯಾನ್ ರೌತ್ ಎಂಬಾತ ಟ್ರಂಪ್ ಅವರ 2024ರ ಅಧ್ಯಕ್ಷೀಯ ಪ್ರಚಾರದ ವೇಳೆ ದಾಳಿ ನಡೆಸಿದ್ದ. ಐದು ಆರೋಪಗಳಲ್ಲಿ ತಪ್ಪಿತಸ್ಥನೆಂದು ಸಾಬೀತಾದ ರೌತ್‌ಗೆ ಯುಎಸ್ ಜಿಲ್ಲಾ ನ್ಯಾಯಾಧೀಶರು ಕಠಿಣ ಶಿಕ್ಷೆ ಘೋಷಿಸಿದ್ದಾರೆ. ಈ ಪ್ರಕರಣದ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ರೌತ್ ವಕೀಲರು ತಿಳಿಸಿದ್ದಾರೆ. ವಾಷಿಂಗ್ಟನ್, ಫೆಬ್ರವರಿ 05: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್(Donald Trump) ಅವರನ್ನು ಹತ್ಯೆ ಮಾಡಲು ಯತ್ನಿಸಿದ್ದ ಫ್ಲೋರಿಡಾದ ವ್ಯಕ್ತಿಯೊಬ್ಬನಿಗೆ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಸೆಪ್ಟೆಂಬರ್ 15, 2024 ರಂದು ವೆಸ್ಟ್ ಪಾಮ್ ಬೀಚ್‌ನ ಟ್ರಂಪ್ ಇಂಟರ್ನ್ಯಾಷನಲ್ ಗಾಲ್ಫ್ ಕ್ಲಬ್‌ನಲ್ಲಿ ಹತ್ಯೆ ಯತ್ನ ನಡೆದಿತ್ತು. ಯುಎಸ್ ಜಿಲ್ಲಾ ನ್ಯಾಯಾಧೀಶರಾದ ಐಲೀನ್ ಕ್ಯಾನನ್ ಫೋರ್ಟ್​ ಪಿಯರ್ಸ್​ ನ್ಯಾಯಾಲಯದಲ್ಲಿ ರಯಾನ್ ರೌತ್‌ಗೆ ಶಿಕ್ಷೆಯನ್ನು ಪ್ರಕಟಿಸಿದರು. ಸೆಪ್ಟೆಂಬರ್‌ನಲ್ಲಿ ನ್ಯಾಯಾಧೀಶರು ಎಲ್ಲಾ ಆರೋಪಗಳಲ್ಲಿ ತಪ್ಪಿತಸ್ಥರೆಂದು ಘೋಷಿಸಿದ ಸ್ವಲ್ಪ ಸಮಯದ ನಂತರ ರೌತ್ ತನ್ನನ್ನು ತಾನೇ ಇರಿದುಕೊಳ್ಳಲು ಪ್ರಯತ್ನಿಸಿದ್ದ. ರೌತ್​ಗೆ ಶಿಕ್ಷೆ ವಿಧಿಸುವುದನ್ನ ಆರಂಭದಲ್ಲಿ ಡಿಸೆಂಬರ್​ನಲ್ಲಿ ನಿಗದಿಪಡಿಸಲಾಗಿತ್ತು. ಸಿಎನ್‌ಎನ್ ಪ್ರಕಾರ, ಸೆಪ್ಟೆಂಬರ್‌ನಲ್ಲಿ ಟ್ರಂಪ್ 2024 ರ ಯುಎಸ್ ಅಧ್ಯಕ್ಷೀಯ ಚುನಾವಣೆಗೆ ಪ್ರಚಾರ ಮಾಡುತ್ತಿದ್ದಾಗ, ಟ್ರಂಪ್ ಮೇಲೆ ದಾಳಿ ನಡೆದಿತ್ತು. ಅಧ್ಯಕ್ಷೀಯ ಅಭ್ಯರ್ಥಿಯ ಹತ್ಯೆಗೆ ಯತ್ನಿಸಿದ್ದು ಸೇರಿದಂತೆ ಐದು ಆರೋಪಗಳಲ್ಲಿ ರೌತ್ ತಪ್ಪಿತಸ್ಥನೆಂದು ಸಾಬೀತಾಯಿತು. 59 ವರ್ಷದ ರೌತ್, ಕಳೆದ ವರ್ಷ ವೆಸ್ಟ್ ಪಾಮ್ ಬೀಚ್‌ನಲ್ಲಿರುವ ಟ್ರಂಪ್ ಇಂಟರ್ನ್ಯಾಷನಲ್ ಗಾಲ್ಫ್ ಕ್ಲಬ್‌ನಲ್ಲಿ ಆಗ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದ ಟ್ರಂಪ್ ಅವರನ್ನು ಕೊಲ್ಲಲು ಪ್ರಯತ್ನಿಸಿದ ಆರೋಪದಲ್ಲಿ ತಪ್ಪಿತಸ್ಥನೆಂದು ಸಾಬೀತಾಗಿದೆ. ಈ ಪ್ರಕರಣದ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ರೌತ್ ಅವರ ವಕೀಲ ಮಾರ್ಟಿನ್ ರಾಸ್ ಹೇಳಿದ್ದಾರೆ. ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ ಪದೇ ಪದೇ ತಪ್ಪಾಗಿ ವರ್ತಿಸುತ್ತಿದ್ದರು, ಇದರಲ್ಲಿ ಟ್ರಂಪ್‌ಗೆ ಗಾಲ್ಫ್ ಆಟಕ್ಕೆ ಸವಾಲು ಹಾಕುವುದು ಮತ್ತು ಅಡಾಲ್ಫ್ ಹಿಟ್ಲರ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಉಲ್ಲೇಖಿಸುವುದು ಸೇರಿತ್ತು. ನ್ಯಾಯಾಧೀಶರು ಅವನನ್ನು ತಪ್ಪಿತಸ್ಥನೆಂದು ಘೋಷಿಸಿದ ಬಳಿಕ ಅಮೆರಿಕದ ಮಾರ್ಷಲ್​ಗಳು ಆತನನ್ನು ನ್ಯಾಯಾಲಯದ ಕೋಣೆಯಿಂದ ಹೊರಗೆ ಕರೆದೊಯ್ಯುವ ಮೊದಲು ರೌತ್ ಕುತ್ತಿಗೆಗೆ ರಿದುಕೊಳ್ಳಲು ಪ್ರಯತ್ನಿಸಿದ್ದ. ಜುಲೈನಲ್ಲಿ ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ನಡೆದ ಪ್ರಚಾರ ರ್ಯಾಲಿಯಲ್ಲಿ ಬಂದೂಕುಧಾರಿಯೊಬ್ಬ ಗುಂಡು ಹಾರಿಸಿದ ನಂತರ, ಫ್ಲೋರಿಡಾದಲ್ಲಿ ನಡೆದ ಈ ಘಟನೆ 2024 ರಲ್ಲಿ ಟ್ರಂಪ್ ಅವರ ಮೇಲೆ ನಡೆದ ಎರಡನೇ ಹತ್ಯೆ ಯತ್ನವಾಗಿತ್ತು. ಗುಂಡಿನ ದಾಳಿಕೋರನನ್ನು ನಂತರ 20 ವರ್ಷದ ಥಾಮಸ್ ಕ್ರೂಕ್ಸ್ ಎಂದು ಗುರುತಿಸಲಾಗಿದ್ದು, ಆತನನ್ನು ಅಧಿಕಾರಿಗಳು ಸ್ಥಳದಲ್ಲೇ ಕೊಂದಿದ್ದರು.

    You Might Also Like

    Comments

    Leave A Comment

    Don’t worry ! Your email address will not be published. Required fields are marked (*).

    Get Newsletter

    Featured News

    Advertisement

    Voting Poll (Checkbox)

    Voting Poll (Radio)

    Readers Opinion