• Feb 14, 2026
  • NPN Log
    ಫೆಬ್ರವರಿ 16ರಂದು ಹಬ್ಬನಘಟ್ಟ-ಅರಸೀಕೆರೆ ಮಧ್ಯೆ ಕಾಲುವೆ ಕಾಮಗಾರಿ ನಡೆಯುತ್ತಿರುವುದರಿಂದ ಕೆಲ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಮೈಸೂರು-ಅರಸೀಕೆರೆ ಮತ್ತು ತಾಳಗುಪ್ಪ ಮಾರ್ಗದ ಕೆಲವು ರೈಲುಗಳು ರದ್ದಾಗಲಿವೆ, ಕೆಲವನ್ನು ಭಾಗಶಃ ರದ್ದುಪಡಿಸಲಾಗಿದೆ ಅಥವಾ ವಿಳಂಬವಾಗಿ ಸಂಚರಿಸಲಿವೆ. ಪ್ರಯಾಣಿಕರು ಅನಾನುಕೂಲ ತಪ್ಪಿಸಲು ಮುಂಚಿತವಾಗಿ ರೈಲ್ವೆ ವೇಳಾಪಟ್ಟಿ ಪರಿಶೀಲಿಸಲು ರೈಲ್ವೆ ಇಲಾಖೆ ಸೂಚಿಸಿದೆ. ಮೈಸೂರು, ಫೆಬ್ರವರಿ 12: ಹಬ್ಬನಘಟ್ಟ- ಅರಸೀಕೆರೆ ನಿಲ್ದಾಣಗಳ ಮಧ್ಯೆ ವಿಶ್ವೇಶ್ವರಯ್ಯ ಜಲ ನಿಗಮ್ ಲಿಮಿಟೆಡ್ (VJNL) ವತಿಯಿಂದ ಕಾಲುವೆ ಕ್ರಾಸಿಂಗ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಫೆಬ್ರವರಿ 16ರ ಸೋಮವಾರದಂದು ಕೆಲ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಹಲವು ರೈಲುಗಳು ರದ್ದಾಗಲಿದ್ದರೆ, ಕೆಲವು ಭಾಗಶಃ ಕ್ಯಾನ್ಸಲ್​​ ಆಗಲಿವೆ. ಇನ್ನು ಕೆಲ ರೈಲುಗಳ ಸಂಚಾರ ಸಮಯ ಮರು ನಿಗದಿಗೊಳ್ಳಲಿದ್ದರೆ, ಮತ್ತೆ ಕೆಲವು ಟ್ರೇನ್​​ಗಳನ್ನು ನಿಯಂತ್ರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ಸಂಚಾರ ರದ್ದುಗೊಂಡ ರೈಲುಗಳು ರೈಲು ಸಂಖ್ಯೆ 56267 ಅರಸೀಕೆರೆ–ಮೈಸೂರು ಪ್ಯಾಸೆಂಜರ್ ರೈಲು ಸಂಖ್ಯೆ 16206 ಮೈಸೂರು–ತಾಳಗುಪ್ಪ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 16205 ತಾಳಗುಪ್ಪ–ಮೈಸೂರು ಎಕ್ಸ್‌ಪ್ರೆಸ್ ಇದನ್ನೂ ಓದಿ: ಬೆಂಗಳೂರು-ಮಂಗಳೂರು ರೈಲು ಪ್ರಯಾಣಿಕರಿಗೆ ಗುಡ್​​​ ನ್ಯೂಸ್​​ ನೀಡಿದ ಸಚಿವ ಅಶ್ವಿನಿ ವೈಷ್ಣವ್ ಇನ್ನು ರೈಲು ಸಂಖ್ಯೆ 16225 ಮೈಸೂರು–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ಮೈಸೂರು–ಅರಸೀಕೆರೆನಡುವಿನ ಸಂಚಾರವನ್ನು ಭಾಗಶಃ ರದ್ದುಪಡಿಸಲಾಗಿದ್ದು, ಅರಸೀಕೆರೆಯಿಂದ ತನ್ನ ನಿಗದಿತ ವೇಳೆಗೆ ಪ್ರಯಾಣ ಆರಂಭಿಸಲಿದೆ. ರೈಲು ಸಂಖ್ಯೆ 56266 ಮೈಸೂರು–ಅರಸೀಕೆರೆ ಪ್ಯಾಸೆಂಜರ್ ರೈಲು 110 ನಿಮಿಷಗಳ ಕಾಲ ಮತ್ತು ರೈಲು ಸಂಖ್ಯೆ 16221 ತಾಳಗುಪ್ಪ–ಮೈಸೂರು ಎಕ್ಸ್‌ಪ್ರೆಸ್ ರೈಲನ್ನು 100 ನಿಮಿಷಗಳ ಕಾಲ ಮಾರ್ಗ ಮಧ್ಯೆ ನಿಯಂತ್ರಿಸಲಾಗುತ್ತದೆ. ಈ ರೈಲುಗಳ ಸಂಚಾರದಲ್ಲಿ ವಿಳಂಬ ರೈಲು ಸಂಖ್ಯೆ 56265 ಅರಸೀಕೆರೆ–ಮೈಸೂರು ಪ್ಯಾಸೆಂಜರ್ ರೈಲು ಅರಸೀಕೆರೆಯಿಂದ 100 ನಿಮಿಷಗಳ ವಿಳಂಬದೊಂದಿಗೆ ಮತ್ತು ರೈಲು ಸಂಖ್ಯೆ 06269 ಮೈಸೂರು–ಎಸ್‌ಎಂವಿಟಿ ಬೆಂಗಳೂರು ಪ್ಯಾಸೆಂಜರ್ ವಿಶೇಷ ರೈಲು ಮೈಸೂರಿನಿಂದ 100 ನಿಮಿಷಗಳ ವಿಳಂಬದೊಂದಿಗೆ ಸಂಚಾರ ನಡೆಸಲಿದೆ ಎಂದು ರೈಲ್ವೇ ಇಲಾಖೆ ಮಾಹಿತಿ ನೀಡಿದೆ.

    You Might Also Like

    Comments

    Leave A Comment

    Don’t worry ! Your email address will not be published. Required fields are marked (*).

    Get Newsletter

    Featured News

    Advertisement

    Voting Poll (Checkbox)

    Voting Poll (Radio)

    Readers Opinion