• Feb 14, 2026
  • NPN Log
    0 ಕೆಜಿ ಗೋಧಿಯನ್ನು ಕದ್ದು ತಲೆ ಮರೆಸಿಕೊಂಡಿದ್ದ ವ್ಯಕ್ತಿಯನ್ನು 45 ವರ್ಷಗಳ ಬಳಿಕ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಆರೋಪಿ ಸಲೀಂ(59)ಎಂದು ಗುರುತಿಸಲಾಗಿದ್ದು,ಪಕ್ಕದ ಧಾರ್ ಜಿಲ್ಲೆಯ ಬಾಗ್ ಪಟ್ಟಣದಲ್ಲಿ ಬಂಧಿಸಲಾಗಿದೆ. ಆತ ರಹಸ್ಯವಾಗಿ ವಾಸಿಸುತ್ತಿದ್ದ ಮತ್ತು ತನ್ನ ಮಗನೊಂದಿಗೆ ಸಣ್ಣ ದಿನಸಿ ಅಂಗಡಿ ನಡೆಸುತ್ತಿದ್ದ. ಕಳ್ಳತನ ನಡೆದ ಸಮಯದಲ್ಲಿ ಗೋಧಿಯ ಮೌಲ್ಯ 184 ರೂ. ಆಗಿದ್ದು, ಪ್ರತಿ ಕಿಲೋಗ್ರಾಂಗೆ 2.05 ರೂ. ದರ ಇತ್ತು. ಭೋಪಾಲ್, ಫೆಬ್ರವರಿ 12: ನಲವತ್ತೈದು ವರ್ಷಗಳ ಹಿಂದೆ 90 ಕೆಜಿ ಗೋಧಿ(Wheat) ಕದ್ದಿದ್ದ ವ್ಯಕ್ತಿಯನ್ನು ಈಗ ಪೊಲೀಸರು ಬಂಧಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. 1980ರಲ್ಲಿ ಈ ಘಟನೆ ನಡೆದಿತ್ತು. ಅದಾದ ಬಳಿಕ ವ್ಯಕ್ತಿ ತಲೆ ಮರೆಸಿಕೊಂಡಿದ್ದ. ಈ ಘಟನೆ ಖಾರ್ಗೋನ್ ಜಿಲ್ಲೆಯಲ್ಲಿ ನಡೆದಿದೆ. ಆರೋಪಿ ಸಲೀಂ(59)ಎಂದು ಗುರುತಿಸಲಾಗಿದ್ದು,ಪಕ್ಕದ ಧಾರ್ ಜಿಲ್ಲೆಯ ಬಾಗ್ ಪಟ್ಟಣದಲ್ಲಿ ಬಂಧಿಸಲಾಗಿದೆ. ಆತ ರಹಸ್ಯವಾಗಿ ವಾಸಿಸುತ್ತಿದ್ದ ಮತ್ತು ತನ್ನ ಮಗನೊಂದಿಗೆ ಸಣ್ಣ ದಿನಸಿ ಅಂಗಡಿ ನಡೆಸುತ್ತಿದ್ದ. ಕಳ್ಳತನ ನಡೆದ ಸಮಯದಲ್ಲಿ ಗೋಧಿಯ ಮೌಲ್ಯ 184 ರೂ. ಆಗಿದ್ದು, ಪ್ರತಿ ಕಿಲೋಗ್ರಾಂಗೆ 2.05 ರೂ. ದರ ಇತ್ತು. 1980 ರ ಹಿಂದಿನ ಪ್ರಕರಣ ಇದಾಗಿದ್ದು, ಖಾರ್ಗೋನ್ ಜಿಲ್ಲೆಯಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಬಾಲ್ಸಮುದ್ ಪ್ರದೇಶದ ಬಳಿಯ ಹೊಲದಲ್ಲಿ ಗೋಧಿಯನ್ನು ಕದ್ದಿದ್ದಕ್ಕಾಗಿ ಏಳು ಜನರ ಮೇಲೆ ಪ್ರಕರಣ ದಾಖಲಾಗಿತ್ತು. ಆರೋಪಿಗಳ ವಿರುದ್ಧ ವಾರಂಟ್ ಹೊರಡಿಸಲಾಗಿತ್ತು, ಆದರೆ ಅವರಲ್ಲಿ ಇಬ್ಬರು ತಲೆಮರೆಸಿಕೊಂಡಿದ್ದರು. ವರ್ಷಗಳಲ್ಲಿ, ಏಳು ಆರೋಪಿಗಳಲ್ಲಿ ಇಬ್ಬರು ಸಾವನ್ನಪ್ಪಿದ್ದರೆ, ಇತರ ನಾಲ್ವರು ಜಾಮೀನು ಪಡೆದಿದ್ದಾರೆ. ಸಲೀಂ ಇಲ್ಲಿಯವರೆಗೆ ಪತ್ತೆಯಾಗಿರಲಿಲ್ಲ. ಹಿರಿಯ ಅಧಿಕಾರಿಗಳ ನಿರ್ದೇಶನದ ಮೇರೆಗೆ, ಶಾಶ್ವತವಾಗಿ ತಲೆಮರೆಸಿಕೊಂಡಿರುವವರನ್ನು ಪತ್ತೆಹಚ್ಚಲು ತಂಡಗಳನ್ನು ಸಕ್ರಿಯಗೊಳಿಸಲಾಯಿತು. 1980 ರ ಹಳೆಯ ಕಳ್ಳತನ ಪ್ರಕರಣವನ್ನು ಪರಿಶೀಲಿಸುವಾಗ, ಒಬ್ಬ ಆರೋಪಿ ಇನ್ನೂ ಕಾಣೆಯಾಗಿದ್ದಾನೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ. ಆತನನ್ನು ಧಾರ್ ಜಿಲ್ಲೆಯ ಬಾಗ್‌ನಿಂದ ಪತ್ತೆಹಚ್ಚಿ ಬಂಧಿಸಲಾಗಿದೆ ಎಂದು ಎಸ್‌ಡಿಒಪಿ ಶ್ವೇತಾ ಶುಕ್ಲಾ ಹೇಳಿದ್ದಾರೆ. ಪೊಲೀಸರ ಪ್ರಕಾರ, ಸಲೀಂ ತನ್ನ ಗುರುತನ್ನು ಬದಲಾಯಿಸಿಕೊಂಡು ಅಪರಾಧ ಸ್ಥಳದಿಂದ ಕೇವಲ 90 ಕಿ.ಮೀ ದೂರದಲ್ಲಿ ವಾಸವಿದ್ದ. ಕಿರಾಣಿ ಅಂಗಡಿ ನಡೆಸುತ್ತಿದ್ದ, ಬಂಧನದ ನಂತರ, ಆತನನ್ನು ಕಾಸ್ರಾವಾಡ ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು. ಇಷ್ಟು ವರ್ಷಗಳ ನಂತರ ಪೊಲೀಸರು ಇನ್ನು ಮುಂದೆ ಈ ಪ್ರಕರಣವನ್ನು ಮುಂದುವರಿಸುವುದಿಲ್ಲ ಎಂದು ಆತ ಭಾವಿಸಿದ್ದ. ಅದಕ್ಕಾಗಿ ಎಂದಿನಂತೆ ಕೆಲಸ ಮುಂದುವರೆಸಿದ್ದ. ಬಂಧನವು ಕುಟುಂಬದಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಲೀಂ ಅವರ ಪತ್ನಿ ತಸ್ಲೀಂ ಅವರು ಕಳ್ಳತನ ನಡೆದಾಗ ಅವರು ಅಪ್ರಾಪ್ತರಾಗಿದ್ದರು ಎಂದು ಆರೋಪಿಸಿದ್ದಾರೆ. ಆಗ ಅವರಿಗೆ ಕೇವಲ 13 ರಿಂದ 15 ವರ್ಷ ವಯಸ್ಸಾಗಿತ್ತು.5 ವರ್ಷಗಳ ನಂತರ ಅಪ್ರಾಪ್ತ ವಯಸ್ಕನ ವಿರುದ್ಧ ಪ್ರಕರಣ ಹೇಗೆ ನಡೆಯುತ್ತದೆ ಎಂದು ಪ್ರಶ್ನಿಸಿದ್ದಾರೆ. ಜಾಮೀನಿಗೆ 15 ಸಾವಿರ ರೂ ಮತ್ತು ದೂರುದಾರನಿಗೆ 6 ಸಾವಿರ ರೂ. ಪಾವತಿಸಬೇಕಾಯಿತು ಎಂದು ಅವರು ಹೇಳಿದ್ದಾರೆ.

    You Might Also Like

    Comments

    Leave A Comment

    Don’t worry ! Your email address will not be published. Required fields are marked (*).

    Get Newsletter

    Featured News

    Advertisement

    Voting Poll (Checkbox)

    Voting Poll (Radio)

    Readers Opinion