• Feb 14, 2026
  • NPN Log
    ಮಿಲಿಟರಿ ನರ್ಸಿಂಗ್ ಸೇವೆ (MNS) ಸಿಬ್ಬಂದಿಗೆ ರಕ್ಷಣಾ ಸಚಿವಾಲಯದಿಂದ ಮಹತ್ವದ ಸುದ್ದಿಯೊಂದು ಬಂದಿದೆ. ಇನ್ನು ಮುಂದೆ ಅವರನ್ನು ಅಧಿಕೃತವಾಗಿ "ಮಾಜಿ ಸೈನಿಕರು" ಎಂದು ಪರಿಗಣಿಸಲಾಗುವುದು. ಈ ನಿರ್ಧಾರದಿಂದ MNS ಸಿಬ್ಬಂದಿಗೆ ಮರು ಉದ್ಯೋಗ, ಸರ್ಕಾರಿ ಹುದ್ದೆಗಳಲ್ಲಿ ಮೀಸಲಾತಿ, ವಯೋಮಿತಿ ಸಡಿಲಿಕೆ ಸೇರಿದಂತೆ ಹಲವು ಸೌಲಭ್ಯಗಳು ದೊರೆಯಲಿವೆ. ಇದು ದೇಶಸೇವೆ ಸಲ್ಲಿಸಿದ ನರ್ಸಿಂಗ್ ಸಿಬ್ಬಂದಿಯ ಭವಿಷ್ಯಕ್ಕೆ ಭದ್ರತೆಯನ್ನು ಒದಗಿಸುವ ಮಹತ್ವದ ಹೆಜ್ಜೆಯಾಗಿದೆ. ಮಿಲಿಟರಿ ನರ್ಸಿಂಗ್ ಸೇವೆ (Military Nursing Service – MNS) ನಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ ರಕ್ಷಣಾ ಸಚಿವಾಲಯದಿಂದ ಮಹತ್ವದ ಮತ್ತು ಸಂತಸದ ಸುದ್ದಿ ದೊರೆತಿದೆ. ಇನ್ಮುಂದೆ MNS ಉದ್ಯೋಗಿಗಳನ್ನು ಅಧಿಕೃತವಾಗಿ “ಮಾಜಿ ಸೈನಿಕರು” (Ex-Servicemen) ಎಂದು ಪರಿಗಣಿಸಲಾಗುತ್ತದೆ. ಈ ನಿರ್ಧಾರದಿಂದ ಅವರಿಗೆ ಮರು ಉದ್ಯೋಗ (Re-employment) ಸೇರಿದಂತೆ ಹಲವು ಸರ್ಕಾರಿ ಸೌಲಭ್ಯಗಳು ಲಭ್ಯವಾಗಲಿವೆ. ಈ ಸಂಬಂಧ ರಕ್ಷಣಾ ಸಚಿವಾಲಯ ನಿಯಮಗಳಲ್ಲಿ ತಿದ್ದುಪಡಿ ಮಾಡಿ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿದ್ದು, ಅವು ಫೆಬ್ರವರಿ 9, 2026ರಿಂದಲೇ ಅನ್ವಯವಾಗುತ್ತಿವೆ. ಕೇಂದ್ರ ಸರ್ಕಾರದ ಸಂವಿಧಾನದ ವಿಧಿ 309ರ ಅಡಿಯಲ್ಲಿ “ಮಾಜಿ ಸೈನಿಕರ (ಕೇಂದ್ರ ನಾಗರಿಕ ಸೇವೆಗಳು ಮತ್ತು ಹುದ್ದೆಗಳಲ್ಲಿ ಮರು ಉದ್ಯೋಗ) ತಿದ್ದುಪಡಿ ನಿಯಮಗಳು, 2026” ಅನ್ನು ಪ್ರಕಟಿಸಲಾಗಿದೆ. ಈ ತಿದ್ದುಪಡಿಯ ಮೂಲಕ ಮಾಜಿ ಸೈನಿಕರ ವ್ಯಾಖ್ಯಾನವನ್ನು ವಿಸ್ತರಿಸಿ, ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯಲ್ಲಿನ MNS ಸಿಬ್ಬಂದಿಯನ್ನು ಕೂಡ ಅದರೊಳಗೆ ಸೇರಿಸಲಾಗಿದೆ. ಹುದ್ದೆ ಅಥವಾ ಶ್ರೇಣಿಯ ಭೇದವಿಲ್ಲದೆ, ಎಲ್ಲ MNS ಉದ್ಯೋಗಿಗಳಿಗೂ ಈ ಮಾನ್ಯತೆ ನೀಡಲಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ಈ ನಿರ್ಧಾರದಿಂದಾಗಿ MNS ಸಿಬ್ಬಂದಿಗೆ ಸೇವಾ ನಿವೃತ್ತಿಯ ನಂತರ ಮತ್ತೆ ಉದ್ಯೋಗ ಪಡೆಯುವುದು ಸುಲಭವಾಗಲಿದೆ. ಇನ್ನು ಮುಂದೆ ಅವರು ಇತರ ಮಾಜಿ ಸೈನಿಕರಂತೆ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಹಾಗೂ ಆದ್ಯತೆಯ ಪ್ರಯೋಜನಗಳನ್ನು ಪಡೆಯಬಹುದು. ಗ್ರೂಪ್ C ನೇಮಕಾತಿಯಲ್ಲಿ ಶೇ.10 ಮೀಸಲಾತಿ ಮತ್ತು ಗ್ರೂಪ್ D ನೇಮಕಾತಿಯಲ್ಲಿ ಶೇ.20 ಮೀಸಲಾತಿ ಸಿಗಲಿದೆ. ಜೊತೆಗೆ, ಮಿಲಿಟರಿ ಸೇವೆಯ ಅವಧಿಗೆ ಹೆಚ್ಚುವರಿಯಾಗಿ 3 ವರ್ಷಗಳ ವಯೋಮಿತಿ ಸಡಿಲಿಕೆ ಲಭ್ಯವಾಗುತ್ತದೆ. UPSC ಮತ್ತು SSC ನೇಮಕಾತಿಗಳಲ್ಲಿಯೂ ಸಮಾನ ಆದ್ಯತೆ ದೊರೆಯಲಿದೆ. ಒಟ್ಟಿನಲ್ಲಿ, MNS ಸಿಬ್ಬಂದಿಯ ಸೇವೆಯನ್ನು ಗೌರವಿಸಿ ಅವರಿಗೆ ಸಮಾನ ಹಕ್ಕುಗಳು ಮತ್ತು ಭದ್ರ ಭವಿಷ್ಯ ಒದಗಿಸಲು ಸರ್ಕಾರ ತೆಗೆದುಕೊಂಡಿರುವ ಈ ಕ್ರಮ ಬಹಳ ಮಹತ್ವದ್ದಾಗಿದೆ. ದೇಶಸೇವೆಯಲ್ಲಿ ತೊಡಗಿರುವ ನರ್ಸಿಂಗ್ ಸಿಬ್ಬಂದಿಗೆ ಇದು ನಿಜಕ್ಕೂ ದೊಡ್ಡ ಉತ್ತೇಜನವಾಗಿದ್ದು, ಅವರ ವೃತ್ತಿಜೀವನಕ್ಕೆ ಹೊಸ ದಿಕ್ಕು ನೀಡಲಿದೆ.

    You Might Also Like

    Comments

    Leave A Comment

    Don’t worry ! Your email address will not be published. Required fields are marked (*).

    Get Newsletter

    Featured News

    Advertisement

    Voting Poll (Checkbox)

    Voting Poll (Radio)

    Readers Opinion