• Feb 14, 2026
  • NPN Log
    BCCI Contracts: ಬಿಸಿಸಿಐ ಪುರುಷ ಹಾಗೂ ಮಹಿಳಾ ತಂಡಗಳ ಹೊಸ ಕೇಂದ್ರ ಒಪ್ಪಂದ ಪ್ರಕಟಿಸಲಿದೆ. ಈ ಬಾರಿ 21 ಮಹಿಳಾ ಕ್ರಿಕೆಟಿಗಿಯರಿಗೆ ಒಪ್ಪಂದ ದೊರೆಯಲಿದ್ದು, ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ, ಜೆಮಿಮಾ ರೋಡ್ರಿಗಸ್ A ಗ್ರೇಡ್‌ನಲ್ಲಿ ₹50 ಲಕ್ಷ ವೇತನ ಪಡೆಯಲಿದ್ದಾರೆ. ಪುರುಷರ ತಂಡದಲ್ಲಿ ರೋಹಿತ್, ಕೊಹ್ಲಿ ಗ್ರೇಡ್ ಕುಸಿತ ಕಂಡಿದ್ದಾರೆ. ಹೊಸ ಆಟಗಾರ್ತಿಯರಿಗೆ ಅವಕಾಶ ಹಾಗೂ ಕೆಲವರಿಗೆ ಹೊರಗುಳಿಯುವಿಕೆ ಈ ಒಪ್ಪಂದದ ಪ್ರಮುಖಾಂಶ. ಬಿಸಿಸಿಐ (BCCI) ಶೀಘ್ರದಲ್ಲೇ ಭಾರತದ ಪುರುಷರ ಹಾಗೂ ಮಹಿಳೆಯರ ಕ್ರಿಕೆಟ್ ತಂಡದ ಹೊಸ ಕೇಂದ್ರ ಒಪ್ಪಂದವನ್ನು (Women’s Central Contracts) ಪ್ರಕಟಿಸಲು ತಯಾರಿ ನಡೆಸಿದೆ. ಅದರಂತೆ ಈ ಬಾರಿ ಎಷ್ಟು ಆಟಗಾರರಿಗೆ ಕೇಂದ್ರ ಒಪ್ಪಂದಗಳನ್ನು ನೀಡಬೇಕು ಎಂಬುದನ್ನು ಬಿಸಿಸಿಐ ಈಗಾಗಲೇ ನಿರ್ಧರಿಸಿದೆ. ಪುರುಷರ ಕೇಂದ್ರ ಒಪ್ಪಂದದಲ್ಲಿ ರೋಹಿತ್ ಶರ್ಮಾ ಹಾಗೂ ವಿರಾ್ ಕೊಹ್ಲಿ ಎ+ ಗ್ರೇಡ್​ನಿಂದ ಬಿ ಗ್ರೇಡ್​ಗೆ ಕುಸಿದಿದ್ದಾರೆ ಎಂದು ವರದಿಯಾಗಿದೆ. ಇತ್ತ ಮಹಿಳಾ ತಂಡದ ಕೇಂದ್ರ ಒಪ್ಪಂದದ ಬಗ್ಗೆಯೂ ಮಾಹಿತಿ ಹೊರಬಿದ್ದಿದ್ದು, ಕಳೆದ ಬಾರಿಯ ಕೇಂದ್ರ ಒಪ್ಪಂದದಲ್ಲಿ ಕೇವಲ 16 ಆಟಗಾರ್ತಿಯರಿದ್ದರೆ, ಈ ಬಾರಿಯ ಕೇಂದ್ರ ಒಪ್ಪಂದದಲ್ಲಿ ಒಟ್ಟು 21 ಮಹಿಳಾ ಆಟಗಾರ್ತಿಯರಿಗೆ ಸ್ಥಾನ ಸಿಗಲಿದೆ ಎಂದು ಹೇಳಲಾಗುತ್ತಿದೆ. ಜೆಮಿಮಾ ರೊಡ್ರಿಗಸ್​ಗೆ ಬಡ್ತಿ ಕಳೆದ ಬಾರಿಯಂತೆ, ನಾಯಕಿ ಹರ್ಮನ್‌ಪ್ರೀತ್ ಕೌರ್, ಉಪನಾಯಕಿ ಸ್ಮೃತಿ ಮಂಧಾನ ಮತ್ತು ಆಲ್‌ರೌಂಡರ್ ದೀಪ್ತಿ ಶರ್ಮಾ ಅವರನ್ನು ಮತ್ತೊಮ್ಮೆ ಎ ಗ್ರೇಡ್‌ಗೆ ಸೇರಿಸಲಾಗಿದೆ. ಜೆಮಿಮಾ ರೋಡ್ರಿಗಸ್ ಕೂಡ ಎ ಗ್ರೇಡ್‌ಗೆ ಬಡ್ತಿ ಪಡೆದಿದ್ದಾರೆ, ಅವರು ಈ ಹಿಂದೆ ಬಿ ಗ್ರೇಡ್‌ನಲ್ಲಿದ್ದರು. ಈ ಆಟಗಾರ್ತಿಯರು ವಾರ್ಷಿಕವಾಗಿ 50 ಲಕ್ಷ ರೂಪಾಯಿಗಳನ್ನು ವೇತನವಾಗಿ ಪಡೆಯುತ್ತಾರೆ. ಏತನ್ಮಧ್ಯೆ, ರೇಣುಕಾ ಠಾಕೂರ್, ಶೆಫಾಲಿ ವರ್ಮಾ, ರಿಚಾ ಘೋಷ್ ಮತ್ತು ಸ್ನೇಹ ರಾಣಾ ಬಿ ಗ್ರೇಡ್​ನಲ್ಲಿ ಸ್ಥಾನ ಪಡೆದಿದ್ದು, 3 ಲಕ್ಷ ರೂಪಾಯಿ ವೇತನ ಪಡೆಯುತ್ತಾರೆ. ಈ ಆಟಗಾರ್ತಿಯರಿಗೆ ಸಿ ಗ್ರೇಡ್‌ ಗ್ರೇಡ್ ಸಿ ಯಲ್ಲಿ ರಾಧಾ ಯಾದವ್, ಅಮಂಜೋತ್ ಕೌರ್, ಪ್ರತೀಕಾ ರಾವಲ್, ಕ್ರಾಂತಿ ಗೌಡ್, ಉಮಾ ಛೆಟ್ರಿ, ಅರುಂಧತಿ ರೆಡ್ಡಿ, ಶ್ರೀ ಚರಣಿ, ಯಾಸ್ತಿಕಾ ಭಾಟಿಯಾ, ಹರ್ಲೀನ್ ಡಿಯೋಲ್, ಕಾಶ್ವಿ ಗೌತಮ್, ಜಿ. ಕಮಲಿನಿ, ವೈಷ್ಣವಿ ಶರ್ಮಾ ಮತ್ತು ತೇಜಲ್ ಸೇರಿದ್ದಾರೆ. ಈ ಆಟಗಾರ್ತಿಯರಿಗೆ ವಾರ್ಷಿಕವಾಗಿ10 ಲಕ್ಷ ರೂ. ವೇತನ ಪಡೆಯಲಿದ್ದಾರೆ. ಪ್ರತೀಕಾ ರಾವಲ್, ಕ್ರಾಂತಿ ಗೌಡ್, ಶ್ರೀ ಚರಣಿ, ಕಶ್ವಿ ಗೌತಮ್, ಜಿ. ಕಮಲಿನಿ, ವೈಷ್ಣವಿ ಶರ್ಮಾ ಮತ್ತು ತೇಜಲ್ ಅವರು ಮೊದಲ ಬಾರಿಗೆ ಕೇಂದ್ರ ಒಪ್ಪಂದದ ಭಾಗವಾಗಲಿದ್ದಾರೆ. ಆದರೆ, ಪೂಜಾ ವಸ್ತ್ರಾಕರ್, ಶ್ರೇಯಾಂಕಾ ಪಾಟೀಲ್ ಮತ್ತು ಟಿಟಾಸ್ ಸಾಧು ಕೇಂದ್ರ ಒಪ್ಪಂದಿಂದ ಹೊರಬಿದ್ದಿದ್ದಾರೆ. ಕೇಂದ್ರ ಒಪ್ಪಂದ ಪಡೆದಿರುವ ಆಟಗಾರ್ತಿಯರು ಒಪ್ಪಂದದಲ್ಲಿ ನಿಗದಿಯಾಗಿರುವ ವೇತನದ ಜೊತೆಗೆ ಪಂದ್ಯದ ಶುಲ್ಕವನ್ನು ಸಹ ವೇತನವಾಗಿ ಪಡೆಯುತ್ತಾರೆ. ಆ ಪ್ರಕಾರ ಟೆಸ್ಟ್ ಪಂದ್ಯವನ್ನಾಡುವ ಆಟಗಾರ್ತಿಗೆ 15 ಲಕ್ಷ, ಏಕದಿನ ಪಂದ್ಯಕ್ಕೆ 6 ಲಕ್ಷ ಮತ್ತು ಟಿ20 ಪಂದ್ಯಕ್ಕೆ 3 ಲಕ್ಷ ರೂ. ವೇತನ ಪಡೆಯುತ್ತಾರೆ. ಬಿಸಿಸಿಐ ಕೇಂದ್ರ ಒಪ್ಪಂದ ಪಟ್ಟಿ ಗ್ರೇಡ್ ಎ: ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ, ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ. ಗ್ರೇಡ್ ಬಿ: ರೇಣುಕಾ ಠಾಕೂರ್, ಶೆಫಾಲಿ ವರ್ಮಾ, ರಿಚಾ ಘೋಷ್, ಸ್ನೇಹ ರಾಣಾ. ಗ್ರೇಡ್ ಸಿ: ರಾಧಾ ಯಾದವ್, ಅಮಂಜೋತ್ ಕೌರ್, ಪ್ರತೀಕಾ ರಾವಲ್, ಕ್ರಾಂತಿ ಗೌಡ್, ಉಮಾ ಛೆಟ್ರಿ, ಅರುಂಧತಿ ರೆಡ್ಡಿ, ಶ್ರೀ ಚರಣಿ, ಯಾಸ್ತಿಕಾ ಭಾಟಿಯಾ, ಹರ್ಲೀನ್ ಡಿಯೋಲ್, ಕಶ್ವಿ ಗೌತಮ್, ಜಿ ಕಮಲಿನಿ, ವೈಷ್ಣವಿ ಶರ್ಮಾ, ತೇಜಲ್.

    You Might Also Like

    Comments

    Leave A Comment

    Don’t worry ! Your email address will not be published. Required fields are marked (*).

    Get Newsletter

    Featured News

    Advertisement

    Voting Poll (Checkbox)

    Voting Poll (Radio)

    Readers Opinion