• Feb 14, 2026
  • NPN Log
    Gold ETFs attract more investment, while Equity mutual funds see decline in inflows: ಈಕ್ವಿಟಿ ಮ್ಯೂಚುವಲ್ ಫಂಡ್​ಗಳಿಗೆ ಹರಿದುಬರುವ ಹೂಡಿಕೆಗಳು ಜನವರಿಯಲ್ಲಿ ಕಡಿಮೆ ಆಗಿವೆ. 2025ರ ಡಿಸೆಂಬರ್​ನಲ್ಲಿ ಈಕ್ವಿಟಿ ಫಂಡ್​ಗಳಿಗೆ 28,054 ಕೋಟಿ ರೂ ಹೂಡಿಕೆ ಹೋಗಿತ್ತು. 2026ರ ಜನವರಿಯಲ್ಲಿ 24,029 ಕೋಟಿ ರೂ ಹೂಡಿಕೆ ಬಂದಿದೆ. ಇದೇ ವೇಳೆ, ಗೋಲ್ಡ್ ಇಟಿಎಫ್​ಗಳಲ್ಲಿ ನಿವ್ವಳ ಒಳ ಹರಿವಿನಲ್ಲಿ ಎರಡು ಪಟ್ಟು ಹೆಚ್ಚಳ ಕಂಡುಬಂದಿದೆ. ವರಿ 10: ಸತತ ಎರಡನೇ ತಿಂಗಳು ಈಕ್ವಿಟಿ ಮ್ಯೂಚುವಲ್ ಫಂಡ್​ಗಳಿಗೆ (Equity Mutual Funds) ಹೂಡಿಕೆಗಳ ಒಳಹರಿವು ಕಡಿಮೆ ಆಗಿದೆ. ಭಾರತೀಯ ಮ್ಯೂಚುವಲ್ ಫಂಡ್​ಗಳ ಸಂಘಟನೆಯಾದ ಎಎಂಎಫ್​ಐ ನೀಡಿರುವ ಮಾಹಿತಿ ಪ್ರಕಾರ ಜನವರಿ ತಿಂಗಳಲ್ಲಿ 24,029 ಕೋಟಿ ರೂ ಮೊತ್ತದಷ್ಟು ಹೂಡಿಕೆಗಳು ಈಕ್ವಿಟಿ ಫಂಡ್​ಗಳಿಗೆ ಬಂದಿವೆ. ಹಿಂದಿನ ತಿಂಗಳಿಗೆ ಹೋಲಿಸಿದರೆ ಜನವರಿಯಲ್ಲಿ ಈಕ್ವಿಟಿ ಫಂಡ್​ಗಳಿಗೆ ಸಿಕ್ಕ ಫಂಡ್​ನಲ್ಲಿ ಶೇ. 14 ಇಳಿಕೆ ಆಗಿದೆ. 2025ರ ಡಿಸೆಂಬರ್ ತಿಂಗಳಲ್ಲಿ ಈಕ್ವಿಟಿ ಫಂಡ್​ಗಳು 28,054 ಕೋಟಿ ರೂ ಹೂಡಿಕೆಯನ್ನು ಆಕರ್ಷಿಸಿದ್ದವು. ಇನ್ನು, 2025ರ ಜನವರಿಯಲ್ಲಿ ಈ ಫಂಡ್​ಗಳಿಗೆ ಹರಿದುಬಂದಿದ್ದ ಹೂಡಿಕೆಯ ಒಟ್ಟು ಮೊತ್ತ 39,687 ಕೋಟಿ ರೂ. ಇದಕ್ಕೆ ಹೋಲಿಸಿದರೆ 2026ರ ಜನವರಿಯಲ್ಲಿ ಹರಿದುಬಂದ ಹೂಡಿಕೆಯಲ್ಲಿ ಬರೋಬ್ಬರಿ ಶೇ. 39ರಷ್ಟು ಕಡಿಮೆ ಆಗಿದೆ. ಈಕ್ವಿಟಿ ಫಂಡ್​ಗಳ ಪೈಕಿ ಮಿಡ್ ಕ್ಯಾಪ್ ಫಂಡ್​ಗಳು, ಸ್ಮಾಲ್ ಕ್ಯಾಪ್ ಫಂಡ್​ಗಳಿಗೆ ಬರುವ ಹೂಡಿಕೆ ಒಳಹರಿವಿಲ್ಲಿ ಶೇ. 23-24ರಷ್ಟು ಕಡಿಮೆ ಆಗಿದೆ. ಇಎಲ್​​ಎಸ್​ಎಸ್ ಫಂಡ್​ಗಳಿಂದ 593 ಕೋಟಿ ರೂ ಹೊರಹರಿವು ಆಗಿದೆ. ಲಾರ್ಜ್ ಕ್ಯಾಪ್ ಫಂಡ್​ಗಳು, ಫ್ಲೆಕ್ಸಿ ಕ್ಯಾಪ್ ಫಂಡ್​ಗಳು, ಫೋಕಸ್ಡ್ ಫಂಡ್​ಗಳು ಬೇಡಿಕೆ ಉಳಿಸಿಕೊಂಡಿವೆ. ಗೋಲ್ಡ್ ಇಟಿಎಫ್​ಗಳಿಗೆ ಹೆಚ್ಚಿದ ಹೂಡಿಕೆ ಈಕ್ವಿಟಿ ಮ್ಯೂಚುವಲ್ ಫಂಡ್​ಗಳಿಗೆ ಜನವರಿಯಲ್ಲಿ ಬೇಡಿಕೆ ತಗ್ಗಿರುವ ಹೊತ್ತಲ್ಲೇ ಗೋಲ್ಡ್ ಇಟಿಎಫ್​ಗಳಿಗೆ (Gold ETFs) ಹೂಡಿಕೆಗಳು ಮುಗಿಬಿದ್ದು ಹೋಗುತ್ತಿವೆ. ಕಳೆದ 1-2 ವರ್ಷದಲ್ಲಿ ಸಿಕ್ಕಾಪಟ್ಟೆ ಬೆಳೆದಿರುವ ಕಾರಣಕ್ಕೆ ಬಹಳಷ್ಟು ಹೂಡಿಕೆದಾರರು ಗೋಲ್ಡ್ ಇಟಿಎಫ್ ಮತ್ತು ಸಿಲ್ವರ್ ಇಟಿಎಫ್​ಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಎಎಂಎಫ್​ಐ ರಿಪೋರ್ಟ್ ಪ್ರಕಾರ ಜನವರಿಯಲ್ಲಿ ನಿವ್ವಳ ಒಳ ಹರಿವು 24,040 ಕೋಟಿ ರೂ ದಅಖಲಾಗಿದೆ. ಡಿಸೆಂಬರ್​ನಲ್ಲಿ ದಾಖಲಾಗಿರುವುದಕ್ಕೆ ಹೋಲಿಸಿದರೆ ಜನವರಿಯಲ್ಲಿ ಎರಡು ಪಟ್ಟು ಹೆಚ್ಚಿದೆ.

    You Might Also Like

    Comments

    Leave A Comment

    Don’t worry ! Your email address will not be published. Required fields are marked (*).

    Get Newsletter

    Featured News

    Advertisement

    Voting Poll (Checkbox)

    Voting Poll (Radio)

    Readers Opinion