• Feb 14, 2026
  • NPN Log
    World in Peril, says Anthropic AI safety team chief Mrinank Sharma in his resignation letter: ಆಂಥ್ರೋಪಿಕ್ ಕಂಪನಿಯ ಎಐ ಸೇಫ್ಟಿ ಟೀಮ್​ನ ಮುಖ್ಯಸ್ಥ ಮೃಣಾಂಕ್ ಶರ್ಮಾ ರಾಜೀನಾಮೆ ನೀಡಿದ್ದಾರೆ. ಎಕ್ಸ್​ನಲ್ಲಿ ಎರಡು ಪುಟಗಳ ಪತ್ರವನ್ನು ಹಾಕಿರುವ ಅವರು ರಾಜೀನಾಮೆಗೆ ಏನು ಕಾರಣ ಎಂಬುದನ್ನು ತಿಳಿಸಿದ್ದಾರೆ. ಪರಸ್ಪರ ಸಂಬಂಧಿತವಾತಿರುವ ವಿವಿಧ ಬಿಕ್ಕಟ್ಟುಗಳು ಈ ಜಗತ್ತನ್ನು ವಿನಾಶದ ಅಂಚಿನಲ್ಲಿರಿಸಿವೆ ಎಂದು ಅವರು ಹೇಳಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೋ, ಫೆಬ್ರುವರಿ 10: ಆಂಥ್ರೋಪಿಕ್​ನ ಸೇಫ್​ಗಾರ್ಡ್ಸ್ ರಿಸರ್ಚ್ ತಂಡದ ಮುಖ್ಯಸ್ಥರಾಗಿದ್ದ ಮೃಣಾಂಕ್ ಶರ್ಮಾ (Mrinank Sharma) ರಾಜೀನಾಮೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಈ ಜಗತ್ತು ವಿನಾಶದ ಅಂಚಿನಲ್ಲಿದೆ (The World in peril) ಎಂದು ಹೇಳಿಕೊಂಡು ಟ್ವೀಟ್ ಮಾಡಿದ್ದಾರೆ. ಆದರೆ ರಾಜೀನಾಮೆಗೆ ನಿರ್ದಿಷ್ಟ ಕಾರಣ ನೀಡದೇ ನಿಗೂಢವಾಗಿರುವ ಅವರ ಟ್ವೀಟ್ ಸಾಕಷ್ಟು ಕುತೂಹಲ ಕೆರಳಿಸುವಂತಿದೆ. ತಮ್ಮ ಟ್ವೀಟ್​ನಲ್ಲಿ ಅವರು ತಾವು ರಾಜೀನಾಮೆ ನೀಡಲು ಕಾರಣವೇನೆಂದು ವಿವರಿಸಿ ಬರೆದಿರುವ ಪತ್ರವೊಂದನ್ನು ಲಗತ್ತಿಸಿದ್ದಾರೆ. ಮೃಣಾಂಕ್ ಶರ್ಮಾ ಅವರು ಅಂಥ್ರೋಪಿಕ್​ನಲ್ಲಿ ಸೇಫ್​ಗಾರ್ಡ್ಸ್ ರಿಸರ್ಚ್ ತಂಡದ ಮುಖ್ಯಸ್ಥರಾಗಿದ್ದರು. ‘ಜಗತ್ತು ವಿನಾಶದ ಅಂಚಿನಲ್ಲಿದೆ’ ಎಂದಿರುವ ಅವರ ಮಾತಿನ ಇಂಗಿತ ನಿಜಕ್ಕೂ ನಿಗೂಢತೆಯನ್ನು ಹೆಚ್ಚಿಸುತ್ತದೆ. ‘ಜಗತ್ತು ವಿನಾಶದಂಚಿನಲ್ಲಿದೆ. ಎಐ, ಅಥವಾ ಬಯೋವೆಪನ್​ಗಗಳಿಂದಷ್ಟೇ ಅಲ್ಲ, ಪರಸ್ಪರ ಜೋಡಿತವಾದ ವಿವಿಧ ಬಿಕ್ಕಟ್ಟುಗಳಿಂದ ಈ ಜಗತ್ತು ಅಪಾಯದಲ್ಲಿದೆ. ಈ ಜಗತ್ತಿನ ಮೇಲೆ ಪರಿಣಾಮ ಬೀರಬಲ್ಲ ನಮ್ಮ ಸಾಮರ್ಥ್ಯಕ್ಕೆ ತಕ್ಕುದಾದಷ್ಟು ವಿವೇಕ ನಮ್ಮಲ್ಲಿ ಬೆಳೆಯುವ ಅವಶ್ಯಕತೆ ಇದೆ..’ ಎಂದು ಮೃಣಾಂಕ್ ಶರ್ಮಾ ಹೇಳಿದ್ದಾರೆ. ಅಂದರೆ, ಮನುಷ್ಯನ ಶಕ್ತಿಯು ಆತನ ಜವಾಬ್ದಾರಿಗಳನ್ನು ಮೀರಿ ಬೆಳೆಯುತ್ತಿದೆ. ಕೋತಿ ಕೈಯಲ್ಲಿ ಮಾಣಿಕ್ಯ ಸಿಕ್ಕಂತಾಗಿದೆ ಎಂಬರ್ಥದಲ್ಲಿ ಆಂಥ್ರೋಪಿಕ್​ನ ಈ ಉನ್ನತ ಅಧಿಕಾರಿ ಹೇಳಿರುವುದು ನಿಜಕ್ಕೂ ಎಐನ ಮುಂದಿನ ದಾರಿಯ ಬಗ್ಗೆ ಯಾರಿಗಾದರೂ ಕಳವಳ ಮೂಡಬಹುದು. ಎಐ ಸುರಕ್ಷತೆ ವಿಚಾರದ ಬಗ್ಗೆ ತಮ್ಮ ಕಂಪನಿ ಹೆಚ್ಚಿನ ಆದ್ಯತೆ ಕೊಡುತ್ತಿಲ್ಲ ಎಂಬುದು ಮೃಣಾಂಕ್ ಬೇಸರ. ‘ಮೌಲ್ಯಗಳ ಆಧಾರದ ಮೇಲೆ ಕ್ರಿಯೆಗಳು ನಡೆಯುವುದು ಈಗ ಬಹಳ ಕಷ್ಟವೆಂಬುದು ಬಾರಿ ಬಾರಿ ತೋರುತ್ತಿದೆ. ಯಾವುದು ಬಹಳ ಮುಖ್ಯವಾಗಿದೆಯೋ ಅದನ್ನು ನಿರ್ಲಕ್ಷಿಸಲು ಈ ಸಂಸ್ಥೆಯಲ್ಲಿ ಮತ್ತು ನನ್ನಲ್ಲಿ ನಿರಂತರ ಒತ್ತಡ ಬರುವುದನ್ನು ಕಂಡಿದ್ದೇನೆ’ ಎಂದು ಆಂಥ್ರೋಪಿಕ್​ನ ಸೇಫ್​ಗಾರ್ಡ್ಸ್ ರಿಸರ್ಚ್ ಟೀಮ್​ನ ಮುಖ್ಯಸ್ಥ ಹೇಳಿದ್ಧಾರೆ. ಮೃಣಾಂಕ್ ಶರ್ಮಾ ಅವರ ಆಂಥ್ರೋಪಿಕ್ ಅವಧಿ ನಿನ್ನೆಯೇ (ಫೆ. 9) ಮುಗಿದಿದೆ. ಇದೀಗ ಅವರು ಬ್ರಿಟನ್ ದೇಶಕ್ಕೆ ಮರಳಿ ಹೋಗಲಿದ್ದಾರಂತೆ. ಒಂದಷ್ಟು ದಿನ ಕಾಣದ ಕಣ್ಮರೆಯಲ್ಲಿ ಇದ್ದುಬಿಡುವುದಾಗಿ ಹೇಳಿದ್ದಾರೆ.

    You Might Also Like

    Comments

    Leave A Comment

    Don’t worry ! Your email address will not be published. Required fields are marked (*).

    Get Newsletter

    Featured News

    Advertisement

    Voting Poll (Checkbox)

    Voting Poll (Radio)

    Readers Opinion