ದಳಪತಿ ವಿಜಯ್ ಮದುವೆಗೆ ಹಾಜರ್: ಕರೂರು ಕಾಲ್ತುಳಿತಕ್ಕೆ ಟೀಕೆ ಗರ್ಜನೆ!
ಚೆನ್ನೈನಲ್ಲಿ ನಡೆದ ಮದುವೆಯಲ್ಲಿ ದಳಪತಿ ವಿಜಯ್ ಭಾಗಿ ಆಗಿದ್ದಾರೆ. ಇದು ಹೈ ಪ್ರಾಫೈಲ್ ಮದುವೆ ಆಗಿತ್ತು. ಈ ಕಾರಣಕ್ಕೆ ಸಾಕಷ್ಟು ಗಣ್ಯರು ಹಾಜರಿ ಹಾಕಿದ್ದರು. ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಸೇರಿದಂತೆ ಅನೇಕ ಗಣ್ಯರು ಇದರಲ್ಲಿ ಭಾಗಿ ಆಗಿದ್ದಾರೆ. ಈ ಬಗ್ಗೆ ಚರ್ಚೆ ನಡೆದಿದೆ. ಅನೇಕರು ವಿಜಯ್ ಅವರನ್ನು ಟೀಕಿಸಿದ್ದಾರೆ.
ದಳಪತಿ ವಿಜಯ್ (vijay) ಅವರು ಸದ್ಯ ಸುದ್ದಿಯಲ್ಲಿದ್ದಾರೆ. ಅವರು ಸದಾ ಒಂದಿಲ್ಲೊಂದು ವಿಷಯಕ್ಕೆ ಸುದ್ದಿ ಆಗುತ್ತಲೇ ಇರುತ್ತಾರೆ. ಅವರ ನಟನೆಯ ‘ಜನ ನಾಯಗನ್’ ರಿಲೀಸ್ ಬಗ್ಗೆ ಇನ್ನೂ ಯಾವುದೇ ಅಪ್ಡೇಟ್ ಸಿಕ್ಕಿಲ್ಲ. ಕಾಲ್ತುಳಿತದ ವೇಳೆ 41 ಜನ ಸತ್ತ ಪ್ರಕರಣದಲ್ಲಿ ಅವರು ವಿಚಾರಣೆ ಎದುರಿಸುತ್ತಿದ್ದಾರೆ. ಈ ಮಧ್ಯೆ ಅವರು ಒಂದು ವಿಷಯಕ್ಕೆ ಟೀಕೆ ಎದುರಿಸಿದ್ದಾರೆ. ಇದಕ್ಕೆ ಕಾರಣ ಮದುವೆಯಲ್ಲಿ ಭಾಗಿ ಆಗಿದ್ದು.
ಚೆನ್ನೈನಲ್ಲಿ ನಡೆದ ಮದುವೆಯಲ್ಲಿ ದಳಪತಿ ವಿಜಯ್ ಭಾಗಿ ಆಗಿದ್ದಾರೆ. ಇದು ಹೈ ಪ್ರಾಫೈಲ್ ಮದುವೆ ಆಗಿತ್ತು. ಈ ಕಾರಣಕ್ಕೆ ಸಾಕಷ್ಟು ಗಣ್ಯರು ಹಾಜರಿ ಹಾಕಿದ್ದರು. ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಸೇರಿದಂತೆ ಅನೇಕ ಗಣ್ಯರು ಇದರಲ್ಲಿ ಭಾಗಿ ಆಗಿದ್ದಾರೆ. ಈ ಬಗ್ಗೆ ಚರ್ಚೆ ನಡೆದಿದೆ. ಅನೇಕರು ವಿಜಯ್ ಅವರನ್ನು ಟೀಕಿಸಿದ್ದಾರೆ.
ಕರೂರಿನಲ್ಲಿ ಕಳೆದ ವರ್ಷ ವಿಜಯ್ ನಡೆಸಿದ ರ್ಯಾಲಿ ವೇಳೆ ಸಾಕಷ್ಟು ಮಂದಿ ಮೃತಪಟ್ಟರು. ಈ ಕಾಲ್ತುಳಿತಕ್ಕೆ ವಿಜಯ್ ಹೊಣೆ ಎಂಬ ಆರೋಪ ಇದೆ. ವಿಜಯ್ ವಿವಾಹ ಫಂಕ್ಷನ್ಗೆ ಹಾಜರಿ ಹಾಕಿದ್ದನ್ನು ಈ ರೀತಿ ಆರೋಪ ಮಾಡಿದವರು ಖಂಡಿಸಿದ್ದಾರೆ. ಇದು ಸರಿ ಅಲ್ಲ ಎಂದು ಹೇಳಿದ್ದಾರೆ. ‘ಕರೂರು ಕಾಲ್ತುಳಿತದ ಮೃತರ ಕುಟುಂಬಕ್ಕೆ ಭೇಟಿ ನೀಡಲು ವಿಜಯ್ ಬಳಿ ಸಮಯವಿಲ್ಲ. ಮದುವೆ ಮನೆಗೆ ತೆರಳಲು ಅವರ ಬಳಿ ಸಮಯವಿದೆ’ ಎಂಬುದು ಅನೇಕರ ಟೀಕೆ.
ಇನ್ನು, ವಿಜಯ್ ನಟನೆಯ ‘ಜನ ನಾಯಗನ್’ ರಿಲೀಸ್ ದಿನಾಂಕ ಇನ್ನೂ ಫಿಕ್ಸ್ ಆಗಿಲ್ಲ. ಸಿನಿಮಾದಲ್ಲಿರುವ ರಾಜಕೀಯ ವಿಷಯವೇ ರಿಲೀಸ್ ವಿಳಂಬಕ್ಕೆ ಕಾರಣ ಎಂಬ ಮಾತುಗಳು ವ್ಯಕ್ತವಾಗಿದೆ. ಈ ಚಿತ್ರವನ್ನು ಕನ್ನಡದ ಕೆವಿಎನ್ ಸಂಸ್ಥೆ ನಿರ್ಮಿಸಿದೆ.

Comments