• Feb 14, 2026
  • NPN Log
    2026ರ ಆರಂಭದಲ್ಲೇ ರಿಲೀಸ್ ಆಗಿದ್ದ ‘ದಿ ರಾಜಾ ಸಾಬ್’ ಸಿನಿಮಾ ಹೀನಾಯವಾಗಿ ಸೋತಿತು. ಆದರೆ ಒಟಿಟಿ ಟ್ರೆಂಡಿಂಗ್​​ನಲ್ಲಿ ಈ ಸಿನಿಮಾ ಈಗ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದೆ. ತೆಲುಗು, ಕನ್ನಡ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ಪ್ರಸಾರ ಕಾಣುತ್ತಿದೆ. ಟಾಲಿವುಡ್ ಸೂಪರ್ ಸ್ಟಾರ್ ಪ್ರಭಾಸ್ (Prabhas) ಅವರು ನಟಿಸಿದ ‘ದಿ ರಾಜಾ ಸಾಬ್’ ಸಿನಿಮಾ ಮೇಲೆ ಅಭಿಮಾನಿಗಳು ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದರು. ಅವರು ನಟಿಸಿದ ಮೊದಲ ಹಾರರ್ ಸಿನಿಮಾ ಎಂಬ ಕಾರಣದಿಂದ ನಿರೀಕ್ಷೆ ಡಬಲ್ ಆಗಿತ್ತು. ಜನವರಿ 9ರಂದು ಚಿತ್ರಮಂದಿರಗಳಲ್ಲಿ ‘ದಿ ರಾಜಾ ಸಾಬ್’ (The Raja Saab) ಸಿನಿಮಾ ಬಿಡುಗಡೆ ಆಗಿತ್ತು. ನಿರೀಕ್ಷಿತ ಪ್ರಮಾಣದಲ್ಲಿ ಕಲೆಕ್ಷನ್ ಮಾಡಲು ಈ ಚಿತ್ರಕ್ಕೆ ಸಾಧ್ಯವಾಗಲಿಲ್ಲ. ಗಲ್ಲಾಪೆಟ್ಟಿಗೆಯಲ್ಲಿ ಫ್ಲಾಪ್ ಆದ ಈ ಸಿನಿಮಾ ಇತ್ತೀಚೆಗೆ ಒಟಿಟಿಗೆ ಬಂತು. ಅಚ್ಚರಿ ಎಂದರೆ, ಒಟಿಟಿಯಲ್ಲಿ (OTT ) ಈ ಸಿನಿಮಾ ಸೂಪರ್ ಹಿಟ್ ಆಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆದ ‘ದಿ ರಾಜಾ ಸಾಬ್’ ಸಿನಿಮಾಗೆ ಒಳ್ಳೆಯ ಓಪನಿಂಗ್ ಸಿಕ್ಕಿತ್ತು. ಆದರೆ ನಂತರದ ದಿನಗಳಲ್ಲಿ ಕಲೆಕ್ಷನ್ ವಿಪರೀತ ಕುಸಿಯಿತು. ಗಲ್ಲಾಪಟ್ಟಿಗೆಯಲ್ಲಿ ಈ ಸಿನಿಮಾ ಮಾಡಿದ ಒಟ್ಟು ಕಲೆಕ್ಷನ್ ಅಂದಾಜು 206 ಕೋಟಿ ರೂಪಾಯಿ. ಚಿತ್ರದ ಒಟ್ಟು ಬಜೆಟ್ 400 ಕೋಟಿ ರೂಪಾಯಿಗೂ ಅಧಿಕ. ಹಾಕಿದ ಬಂಡವಾಳ ಮರಳಿ ಬಂದಿಲ್ಲ. ಅದರಿಂದ ವಿತರಕರಿಗೆ ನಷ್ಟ ಆಯಿತು. ಚಿತ್ರಮಂದಿರದಲ್ಲಿ ಫ್ಲಾಪ್ ಆಗಿದ್ದರಿಂದ ಕೆಲವೇ ದಿನಗಳಲ್ಲಿ ‘ದಿ ರಾಜಾ ಸಾಬ್’ ಸಿನಿಮಾ ಒಟಿಟಿಗೆ ಬಂತು. ಫೆಬ್ರವರಿ 6ರಿಂದ ಈ ಸಿನಿಮಾ ‘ಜಿಯೋ ಹಾಟ್​ಸ್ಟಾರ್’ ಒಟಿಟಿ ಮೂಲಕ ಪ್ರಸಾರ ಆಗುತ್ತಿದೆ. ಒಟಿಟಿಯಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರು ಕೂಡ ನೆಗೆಟಿವ್ ವಿಮರ್ಶೆ ನೀಡಿದ್ದಾರೆ. ಹಾಗಿದ್ದರೂ ಕೂಡ ಈ ಸಿನಿಮಾ ಟ್ರೆಂಡಿಂಗ್​​ನಲ್ಲಿದೆ. ಒಟಿಟಿ ವೀಕ್ಷಕರು ಮುಗಿಬಿದ್ದು ‘ದಿ ರಾಜಾ ಸಾಬ್’ ಸಿನಿಮಾವನ್ನು ನೋಡುತ್ತಿದ್ದಾರೆ. ತೆಲುಗಿನಲ್ಲಿ ಮಾತ್ರವಲ್ಲದೇ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಯಲ್ಲೂ ಈ ಸಿನಿಮಾ ವೀಕ್ಷಣೆಗೆ ಲಭ್ಯವಾಗಿದೆ. ತೆಲುಗು, ತಮಿಳು ಮತ್ತು ಕನ್ನಡ ಒಟಿಟಿ ಟ್ರೆಂಡಿಂಗ್​​ನಲ್ಲಿ ಈ ಸಿನಿಮಾ ನಂಬರ್ 1 ಸ್ಥಾನ ಪಡೆದಿದೆ. ಮಲಯಾಳಂನಲ್ಲಿ 2ನೇ ಸ್ಥಾನ ಸಿಕ್ಕಿದೆ. ಮಾರುತಿ ಅವರು ನಿರ್ದೇಶನ ಮಾಡಿದ ‘ದಿ ರಾಜಾ ಸಾಬ್’ ಸಿನಿಮಾದಲ್ಲಿ ಪ್ರಭಾಸ್ ಅವರು ಹಲವು ಗೆಟಪ್ ಧರಿಸಿದ್ದಾರೆ. ಸಂಜಯ್ ದತ್, ನಿಧಿ ಅಗರ್​ವಾಲ್, ಮಾಳವಿಕಾ ಮೋಹನನ್, ರಿದ್ಧಿ ಕುಮಾರ್, ಬೋಮನ್ ಇರಾನಿ, ಮುರಳಿ ಶರ್ಮಾ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

    You Might Also Like

    Comments

    Leave A Comment

    Don’t worry ! Your email address will not be published. Required fields are marked (*).

    Get Newsletter

    Featured News

    Advertisement

    Voting Poll (Checkbox)

    Voting Poll (Radio)

    Readers Opinion