• Jan 02, 2026
  • NPN Log
    AR Rahman acting: ಹಲವು ದಶಕಗಳಿಂದಲೂ ಭಾರತೀಯ ಚಿತ್ರರಂಗದಲ್ಲಿ ಸಂಗೀತ ಮಾಂತ್ರಿಕ ಎಂದು ಕರೆಸಿಕೊಂಡಿದ್ದಾರೆ ಎಆರ್ ರೆಹಮಾನ್. ಅವರ ಸಂಗೀತ ಪ್ರತಿಭೆಗೆ ಎರಡು ಆಸ್ಕರ್ ಸಹ ಧಕ್ಕಿದೆ. ಈಗಲೂ ಸಹ ಭಾರತದ ಅತ್ಯಂತ ಬೇಡಿಕೆ ಸಂಗೀತ ನಿರ್ದೇಶಕ ಎಆರ್ ರೆಹಮಾನ್, ಇದೀಗ ರೆಹಮಾನ್ ಅವರು ಮೊಟ್ಟ ಮೊದಲ ಬಾರಿಗೆ ಸಿನಿಮಾ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಯಾವುದು ಆ ಸಿನಿಮಾ? ನಟನೆ ಆರಂಭಿಸಿದ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಎಆರ್ ರೆಹಮಾನ್ (AR Rahman), ಭಾರತ ಚಿತ್ರರಂಗದ ಲೆಜೆಂಡರಿ ಸಂಗೀತ ನಿರ್ದೇಶಕ. ಕಳೆದ ಕೆಲವು ದಶಕಗಳಿಂದಲೂ ಸಂಗೀತ ಕ್ಷೇತ್ರದಲ್ಲಿ ನಂಬರ್ 1 ಸ್ಥಾನದಲ್ಲಿದ್ದಾರೆ ಎಆರ್ ರೆಹಮಾನ್. ಹಲವಾರು ಹೊಸ ಸಂಗೀತ ನಿರ್ದೇಶಕರು ಬಂದು ಹೋದರೂ ಸಹ ರೆಹಮಾನ್ ಸಂಗೀತ ಇಂದಿಗೂ ಸೂಪರ್ ಹಿಟ್ ಆಗುತ್ತಿದೆ. ಭಾರತದ ಸಿನಿಮಾಗಳು ಮಾತ್ರವೇ ಅಲ್ಲದೆ ಹಾಲಿವುಡ್​​ನಲ್ಲೂ ಬೇಡಿಕೆ ಹೊಂದಿದ್ದಾರೆ ಎಆರ್ ರೆಹಮಾನ್. ಸಂಗೀತ ಕ್ಷೇತ್ರದಲ್ಲಿ ಬಹಳ ಬ್ಯುಸಿ ಆಗಿರುವ ಹೊತ್ತಿನಲ್ಲಿಯೇ ರೆಹಮಾನ್, ನಟನೆಯನ್ನೂ ಆರಂಭಿಸಿದ್ದಾರೆ. ರೆಹಮಾನ್ ಅವರು ಈ ಹಿಂದೆ ಕೆಲವು ಆಲ್ಬಂ ಹಾಡುಗಳಲ್ಲಿ ಕಾಣಿಸಿಕೊಂಡಿದ್ದಾರೆ, ಕೆಲವು ಹಾಡುಗಳಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚೆಗೆ ಕೆಲವು ಯೂಟ್ಯೂಬ್ ವಿಡಿಯೋಗಳಲ್ಲಿಯೂ ಸಹ ಕಾಣಿಸಿಕೊಂಡಿದ್ದಾರೆ ಆದರೆ ಎಂದೂ ಸಹ ಪೂರ್ಣ ಪ್ರಮಾಣದ ಪಾತ್ರದಲ್ಲಿ ನಟಿಸಿದ್ದೇ ಇಲ್ಲ. ಆದರೆ ಇದೀಗ ಎಆರ್ ರೆಹಮಾನ್ ಅವರು ಮೊದಲ ಬಾರಿಗೆ ಸಿನಿಮಾ ಪಾತ್ರವೊಂದರಲ್ಲಿ ನಟಿಸಲು ಮುಂದಾಗಿದ್ದಾರೆ. ರೆಹಮಾನ್ ಅವರ ಈ ಸಾಹಸ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಎಆರ್ ರೆಹಮಾನ್ ಅವರು ತಮಿಳಿನ ‘ಮೂನ್ ವಾಕ್’ ಹೆಸರಿನ ಸಿನಿಮಾದ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ‘ಮೂನ್ ವಾಕ್’ ಸಿನಿಮಾದ ನಾಯಕ ಖ್ಯಾತ ನಟ ಪ್ರಭುದೇವ. ಎಆರ್ ರೆಹಮಾನ್ ಮತ್ತು ಪ್ರಭುದೇವ ಬಹಳ ಒಳ್ಳೆಯ ಗೆಳೆಯರು. ಇದೇ ಸಲುಗೆಯ ಕಾರಣಕ್ಕೆ ರೆಹಮಾನ್ ಅವರು ಮೊದಲ ಬಾರಿಗೆ ಸಿನಿಮಾನಲ್ಲಿ ಪಾತ್ರವೊಂದರಲ್ಲಿ ನಟಿಸಲು ಒಪ್ಪಿಗೆ ಸೂಚಿಸಿದ್ದಾರೆ. ಮನೋಜ್ ಎನ್​​ಎಸ್ ಎಂಬುವರು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಬಿಹೈಂದ್ ವೂಡ್ಸ್ ನಿರ್ಮಾಣ ಸಂಸ್ಥೆ ಸಿನಿಮಾದ ನಿರ್ಮಾಣ ಮಾಡಲಿದೆ. ‘ಮೂನ್​ವಾಕ್’ ಹೆಸರೇ ಸೂಚಿಸುತ್ತಿರುವ ನೃತ್ಯದ ವಿಷಯ ಹೊಂದಿರುವ ಹಾಸ್ಯ ಪ್ರಧಾನ ಸಿನಿಮಾ ಇದಾಗಿದೆ. ಸಿನಿಮಾನಲ್ಲಿ ಎಆರ್ ರೆಹಮಾನ್ ಕೋಪಿಷ್ಟ ಸಿನಿಮಾ ನಿರ್ದೇಶಕನ ಪಾತ್ರದಲ್ಲಿ ನಟಿಸಲಿದ್ದಾರೆ. ‘ಮೂನ್​​ವಾಕ್’ ಸಿನಿಮಾನಲ್ಲಿ ಎಆರ್ ರೆಹಮಾನ್ ನಿರ್ವಹಿಸುತ್ತಿರುವ ಪಾತ್ರದ ಹೆಸರೂ ಸಹ ಎಆರ್ ರೆಹಮಾನ್ ಆಗಿರಲಿದೆ. ಆದರೆ ಅಲ್ಲಿ ಅವರದ್ದು ಸಿನಿಮಾ ನಿರ್ದೇಶಕನ ಪಾತ್ರ. ಅದು ಮಾತ್ರವೇ ಅಲ್ಲದೆ, ‘ಮೂನ್​​ವಾಕ್’ ಸಿನಿಮಾದ ಎಲ್ಲ ಐದೂ ಹಾಡುಗಳನ್ನು ರೆಹಮಾನ್ ಅವರೇ ಹಾಡಿರುವುದು ಮತ್ತೊಂದು ವಿಶೇಷ. ಈ ಹಿಂದೆ ಪೂರ್ಣ ಸಿನಿಮಾ ಆಲ್ಬಂನಲ್ಲಿ ರೆಹಮಾನ್ ಒಬ್ಬರೇ ಹಾಡಿದ್ದೇ ಇಲ್ಲ. ಸಿನಿಮಾದ ಹಲವು ದೃಶ್ಯಗಳ ಚಿತ್ರೀಕರಣವನ್ನು ರೆಹಮಾನ್ ಅವರು ಈಗಾಗಲೇ ಮುಗಿಸಿದ್ದಾರೆ. ಇನ್ನು ಕೆಲವು ದೃಶ್ಯಗಳಷ್ಟೆ ಬಾಕಿ ಇವೆಯಂತೆ. ಸಿನಿಮಾ ನಟನೆಯನ್ನು ಬಹಳ ಎಂಜಾಯ್ ಮಾಡಿರುವುದಾಗಿ ರೆಹಮಾನ್ ಹೇಳಿಕೊಂಡಿದ್ದಾರೆ. ರೆಹಮಾನ್ ಅವರು ಸಂಗೀತ ನೀಡಿರುವ ‘ಪೆದ್ದಿ’ ಸಿನಿಮಾದ ಹಾಡುಗಳು ಸಖತ್ ಹಿಟ್ ಆಗಿವೆ. ಇದರ ಜೊತೆಗೆ ರೆಹಮಾನ್ ‘ರಾಮಾಯಣ’ ಸಿನಿಮಾಕ್ಕೂ ಸಂಗೀತ ನೀಡುತ್ತಿದ್ದಾರೆ. ಪ್ರಸ್ತುತ ಅವರ ಕೈಯಲ್ಲಿ 15ಕ್ಕೂ ಹೆಚ್ಚು ಸಿನಿಮಾಗಳಿವೆ.

    You Might Also Like

    Comments

    Leave A Comment

    Don’t worry ! Your email address will not be published. Required fields are marked (*).

    Get Newsletter

    Featured News

    Advertisement

    Voting Poll (Checkbox)

    Voting Poll (Radio)

    Readers Opinion