• Feb 14, 2026
  • NPN Log
    Chandrahas song controversy: ಸಿನಿಮಾ ನಾಯಕರುಗಳು ಸಿನಿಮಾಗಳಲ್ಲಿ ಹಾಗೂ ನಿಜ ಜೀವನದಲ್ಲಿ ‘ನಾಯಕ’ರಾಗಿ ಉಳಿದಿಲ್ಲ. ನಾಯಕರೆಂದರೆ ರೌಡಿಗಳು, ಕತ್ತರಿಸುವವರು, ಕೊಲ್ಲವವರು ಆಗಿದ್ದಾರೆ. ನಿಜ ಜೀವನದಲ್ಲಿಯೂ ಕೆಲ ನಾಯಕ ನಟರು ಅದೇ ರೀತಿಯ ರೌಡಿ, ದುಷ್ಟ ವರ್ತನೆಗಳನ್ನು ತೋರುತ್ತಾರೆ. ಇಂಥಹಾ ‘ದುಷ್ಟ ನಾಯಕ’ರ ಪಟ್ಟಿಗೆ ಹೊಸ ಸೇರ್ಪಡೆ ಚಂದ್ರಹಾಸ್. ಸಿನಿಮಾ (Cinema) ನಾಯಕರುಗಳು ಸಿನಿಮಾಗಳಲ್ಲಿ ಹಾಗೂ ನಿಜ ಜೀವನದಲ್ಲಿ ‘ನಾಯಕ’ರಾಗಿ ಉಳಿದಿಲ್ಲ. ನಾಯಕರೆಂದರೆ ರೌಡಿಗಳು, ಕತ್ತರಿಸುವವರು, ಕೊಲ್ಲವವರು ಆಗಿದ್ದಾರೆ. ನಿಜ ಜೀವನದಲ್ಲಿಯೂ ಕೆಲ ನಾಯಕ ನಟರು ಅದೇ ರೀತಿಯ ರೌಡಿ, ದುಷ್ಟ ವರ್ತನೆಗಳನ್ನು ತೋರುತ್ತಾರೆ. ಇಂಥಹಾ ‘ದುಷ್ಟ ನಾಯಕ’ರ ಪಟ್ಟಿಗೆ ಹೊಸ ಸೇರ್ಪಡೆ ಚಂದ್ರಹಾಸ್. ತೆಲುಗಿನ ಈ ಹೊಸ ಹೀರೋ, ವೇದಿಕೆ ಮೇಲೆ ಅಸಭ್ಯವಾದ ಹಾಡು ಹಾಡಿದ್ದಲ್ಲದೆ, ಪ್ರಶ್ನೆ ಮಾಡಿದವರಿಗೆ ಬೆದರಿಕೆ ಸಹ ಹಾಕಿದ್ದಾರೆ. ಆಟಿಟ್ಯೂಡ್ ಸ್ಟಾರ್ ಎಂದು ಅಡ್ಡ ಹೆಸರಿಟ್ಟುಕೊಂಡಿರುವ ಚಂದ್ರಹಾಸ್, ಹಿರಿಯ ನಟ ಇಟಿವಿ ಪ್ರಭಾಕರ್ ಅವರ ಪುತ್ರ. ಇದೀಗ ಅವರ ನಟನೆಯ ‘ಬರಾಬರ್ ಪ್ರೇಮಿಸ್ತ’ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ವೇದಿಕೆ ಏರಿದ ಚಂದ್ರಹಾಸ್, ಅಶ್ಲೀಲವಾದ ಹಾಡೊಂದನ್ನು ಹಾಡಿದ್ದರು. ಎದುರಿಗೆ ಸಿನಿಮಾದ ನಾಯಕಿ ಸೇರಿದಂತೆ ಹಲವು ಮಹಿಳೆಯರು, ಖ್ಯಾತ ನಟ ಜೆಡಿ ಚಕ್ರವರ್ತಿ ಸೇರಿದಂತೆ ಹಲವು ಹಿರಿಯರು ಕೂತಿದ್ದರೂ ಸಹ ನಟ ಚಂದ್ರಹಾಸ್ ಬಹಳ ಹೆಮ್ಮೆ, ಅಹಂನಿಂದ ಅಶ್ಲೀಲವಾದ ಹಾಡೊಂದನ್ನು ಹಾಡಿದ್ದಾರೆ. ಹಾಡಿನಲ್ಲಿ ಸೊಂಟದ ಕೆಳಗಿನ ಪದಗೆಳ ಬಳಕೆಯನ್ನು ಮಾಡಿದ್ದಾರೆ. ಇದು ಅತಿಥಿ ಜೆಡಿ ಚಕ್ರವರ್ತಿ ಸೇರಿದಂತೆ ಅಲ್ಲಿದ್ದ ಹಲವು ಮಹಿಳೆಯರಿಗೆ, ಪತ್ರಕರ್ತರಿಗೆ ಇರುಸು ಮುರುಸು ಉಂಟು ಮಾಡಿದೆ. ಹಾಡಿನ ಬಳಿಕ ಅಲ್ಲೇ ಇದ್ದ ಕೆಲ ಪತ್ರಕರ್ತರು ಅಸಭ್ಯ ಹಾಡಿನ ಔಚಿತ್ರವನ್ನು ಚಂದ್ರಹಾಸ್ ಬಳಿ ಪ್ರಶ್ನೆ ಮಾಡಿದಾಗ ಚಂದ್ರಹಾಸ್ ಸಿಟ್ಟಾಗಿ ಒಬ್ಬ ಪತ್ರಕರ್ತನಿಗೆ ಬೆದರಿಕೆ ಸಹ ಹಾಕಿದ್ದಾರೆ. ಅದರ ಬೆನ್ನಲ್ಲೆ ಚಂದ್ರಹಾಸ್ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಘಟನೆ ವಿವಾದದ ರೂಪ ಪಡೆಯುತ್ತಿದ್ದಂತೆ ‘ಬರಾಬರ್ ಪ್ರೇಮಿಸ್ತ’ ಚಿತ್ರದ ನಿರ್ದೇಶಕ ಸಂಪತ್ ರುದ್ರಾ ಮತ್ತು ನಿರ್ಮಾಪಕರು ಮಾಧ್ಯಮಗಳ ಮುಂದೆ ಬಂದು ಕ್ಷಮೆಯಾಚಿಸಿದ್ದಾರೆ. “ಆ ಹಾಡು ನಮ್ಮ ಸಿನಿಮಾದಲ್ಲಿಲ್ಲ, ನಮ್ಮ ಹೀರೋ ಅವರ ಅತಿ ಉತ್ಸಾಹದಿಂದ ಮಾಡಿದ ಕೆಲಸ ಅದು. ಇದರಿಂದ ನಮಗೂ ಆಘಾತವಾಗಿದೆ” ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ನಟ ಚಂದ್ರಹಾಸ್ ಮಾತ್ರ, ‘ನಾನು ಯಾರ ಬಳಿಯೂ ಕ್ಷಮೆ ಕೇಳುವುದಿಲ್ಲ. ನನ್ನ ಹಾಡಿನ ಕೆಲ ಭಾಗವನ್ನಷ್ಟೆ ಕಟ್ ಮಾಡಿ, ನನ್ನ ತೇಜೋವಧೆಗೆ ಬಳಸಲಾಗುತ್ತಿದೆ’ ಎಂದಿದ್ದಾರೆ.

    You Might Also Like

    Comments

    Leave A Comment

    Don’t worry ! Your email address will not be published. Required fields are marked (*).

    Get Newsletter

    Featured News

    Advertisement

    Voting Poll (Checkbox)

    Voting Poll (Radio)

    Readers Opinion