• Jan 02, 2026
  • NPN Log
    Story of Shankh Air founder Shravan Kumar Vishwakarma: ಉತ್ತರಪ್ರದೇಶದ ಶ್ರವಣಕುಮಾರ್ ವಿಶ್ವಕರ್ಮ ಎಂಬುವವರು ಶಂಖ್ ಏರ್​ನ ಛೇರ್ಮನ್ ಆಗಿದ್ದಾರೆ. ವಿಮಾನ ಹಾರಾಟ ನಡೆಸಲು ಅನುಮತಿ ಪಡೆದ ಮೂರು ಹೊಸ ವಿಮಾನ ಸಂಸ್ಥೆಗಳಲ್ಲಿ ಶಂಖ್ ಏರ್ ಒಂದು. ವಿಶ್ವಕರ್ಮ ಅವರು ಆಟೊ, ಟೆಂಪೋ ಡ್ರೈವರ್ ಆಗಿದ್ದವರು, ಈಗ ವಿಮಾನ ಕಂಪನಿಯನ್ನು ನಡೆಸುತ್ತಿರುವುದು ಒಂದು ರೋಚಕ ಕಥೆ. ಕೇಂದ್ರ ಸರ್ಕಾರದಿಂದ ಲೈಸೆನ್ಸ್ ಪಡೆದ ಮೂರು ಹೊಸ ಏರ್ಲೈನ್ ಕಂಪನಿಗಳಲ್ಲಿ ಶಂಖ್ ಏರ್ (Shankh Air) ಒಂದು. ಇದರ ಸ್ಥಾಪನೆ ಹಾಗೂ ಸ್ಥಾಪಕನ ಹಿಂದಿನ ಕಥೆ ನಿಜಕ್ಕೂ ರೋಚಕ. ಮನಸ್ಸಿದ್ದರೆ ಮಾರ್ಗ ಎನ್ನುವುದಕ್ಕೆ ಮಾದರಿ ಶ್ರವಣ್ ಕುಮಾರ್ ವಿಶ್ವಕರ್ಮ (Shravan Kumar Vishwakarma). ಉತ್ತರಪ್ರದೇಶದ ಈ ವ್ಯಕ್ತಿ ಒಂದು ಕಾಲದಲ್ಲಿ ಕಾನಪುರ್​ನ ಬೀದಿಗಳಲ್ಲಿ ಟೆಂಪೋ ಡ್ರೈವರ್ ಆಗಿ ಜೀವನ ನಿರ್ವಹಣೆ ಮಾಡುತ್ತಿದ್ದವ. ಇವತ್ತು ವಿಮಾನ ಕಂಪನಿಯ ಮಾಲೀಕನಾಗಿ ಬೆಳೆದಿದ್ದಾರೆ. ಶಂಖ್ ಏರ್ ಶೀಘ್ರದಲ್ಲೇ ವಿಮಾನಗಳ ಹಾರಾಟ ನಡೆಸಲಿದೆ. ಶ್ರವಣ್ ಕುಮಾರ್ ವಿಶ್ವಕರ್ಮ ಹೆಚ್ಚು ಓದಲಿಲ್ಲ. ಆಟೊರಿಕ್ಷಾ ಓಡಿಸುತ್ತಿದ್ದರು. ಟೆಂಪೋ ಇಟ್ಟುಕೊಂಡು ಕೆಲ ಬ್ಯುಸಿನೆಸ್​ಗಳಿಗೆ ವಿಫಲ ಯತ್ನ ಮಾಡಿದರು. ಆದರೆ, ಹತಾಶರಾಗಲಿಲ್ಲ. 2014ರಲ್ಲಿ ಸಿಮೆಂಟ್ ಬ್ಯುಸಿನೆಸ್​ಗೆ ಇಳಿದಾಗ ವಿಶ್ವಾಸ ಸಿಕ್ಕಿತು. ಟಿಎಂಟಿ ರೀಬಾರ್ ಉದ್ಯಮ ಕೈಹಿಡಿಯಿತು. ಸಿಮೆಂಟ್, ಮೈನಿಂಗ್ ಮತ್ತು ಟ್ರಾನ್ಸ್​ಪೋರ್ಟ್ ಸೆಕ್ಟರ್​ನಲ್ಲಿ ಬ್ಯುಸಿನೆಸ್ ಬೆಳೆಸಿದರು. ಹಲವು ಟ್ರಕ್​ಗಳನ್ನು ಖರೀದಿಸಿದರು. ಈ ಹಂತದಲ್ಲೇ ಅವರಿಗೆ ಭವಿಷ್ಯದ ಯೋಜನೆಗಳು ಮನಸ್ಸಿಗೆ ಬಂದವು. ಅಂಥ ಒಂದು ಆಲೋಚನೆಯ ಕುಡಿಯೇ ಶಂಖ್ ಏರ್. ನಾಲ್ಕು ವರ್ಷದ ಹಿಂದೆ, ಟ್ರಕ್​ನಂತೆ ವಿಮಾನಗಳನ್ನೂ ಓಡಿಸಬೇಕೆಂಬ ಆಲೋಚನೆ ವಿಶ್ವಕರ್ಮರ ತಲೆಯಲ್ಲಿ ಮೊದಲಿಟ್ಟಿತು. ಅಷ್ಟಕ್ಕೇ ಅದು ನಿಲ್ಲಲಿಲ್ಲ. ವಿಮಾನ ಸಂಸ್ಥೆ ಕಟ್ಟಲು ಏನು ಬೇಕು, ಆ ಉದ್ಯಮ ಹೇಗೆ ಕೆಲಸ ಮಾಡುತ್ತೆ ಎಂಬುದನ್ನು ಅರಿಯಲು ಯತ್ನಿಸಿದರು. ತಮ್ಮ ಟ್ರಾನ್ಸ್​ಪೋರ್ಟ್ ಬ್ಯುಸಿನೆಸ್​ನಲ್ಲಿ ವಿಮಾನದ ಸೇವೆಯನ್ನೂ ನಡೆಸಿ ಅನುಭವ ಇದ್ದ ಕಾರಣ ಶಂಖ್ ಏರ್​ಗೆ ಸರ್ಕಾರದಿಂದ ಎನ್​ಒಸಿ ಕೂಡ ಸಿಕ್ಕಿತು. ಬಸ್, ಟೆಂಪೋದಂತೆ ವಿಮಾನವೂ ಕೂಡ ಒಂದು ಸಾರಿಗೆ ವಾಹನ ಎನ್ನುವ ವಿಶ್ವಕರ್ಮ ವಿಮಾನಗಳ ಬಗ್ಗೆ ಶ್ರವಣಕುಮಾರ್ ವಿಶ್ವಕರ್ಮ ಅವರಿಗಿರುವ ಧೋರಣೆ ಗಮನಾರ್ಹ ಎನಿಸುತ್ತದೆ. ಅವರ ಪ್ರಕಾರ ವಿಮಾನ ಎಂಬುದು ಬಸ್ ಅಥವಾ ಟೆಂಪೋ ರೀತಿಯಲ್ಲೇ ಒಂದು ಸಾರಿಗೆ ವಾಹನ ಮಾತ್ರ. ಅದನ್ನು ಬೇರೆ ರೀತಿಯಲ್ಲಿ ನೋಡಬಾರದು ಎಂದು ಶಂಖ್ ಏರ್​ನ ಛೇರ್ಮನ್ ಆಗಿರುವ ಅವರು ಹೇಳುತ್ತಾರೆ. ಶಂಖ್ ಏರ್ ಇದೇ ಜನವರಿ ತಿಂಗಳಲ್ಲಿ ಕಾರ್ಯಾಚರಣೆಗೆ ಇಳಿಯುತ್ತದೆ. ಆರಂಭದಲ್ಲಿ ಏರ್​ಬಸ್​ನ ಮೂರು ವಿಮಾನಗಳನ್ನು ಬಾಡಿಗೆಗೆ ಪಡೆಯಲಾಗಿದೆ. ಲಕ್ನೋ, ಮುಂಬೈ, ದೆಹಲಿ ಮತ್ತಿತರ ಕೆಲ ನಗರಗಳಿಗೆ ಇವರ ವಿಮಾನಗಳ ಹಾರಾಟ ನಡೆಯುತ್ತದೆ.

    You Might Also Like

    Comments

    Leave A Comment

    Don’t worry ! Your email address will not be published. Required fields are marked (*).

    Get Newsletter

    Featured News

    Advertisement

    Voting Poll (Checkbox)

    Voting Poll (Radio)

    Readers Opinion