ಮಹಿಳಾ-ಪುರುಷ ಉದ್ಯೋಗಿಗಳು: ಪುರುಷ ಮ್ಯಾನೇಜರ್ ಬೇಕು
ಬಹುತೇಕ ಉದ್ಯೋಗಿಗಳಿಗೆ ಆಫೀಸು ಹಾಗೂ ಬಾಸ್ ಬಗ್ಗೆ ಇರುವ ಅಭಿಪ್ರಾಯಗಳು ಒಂದೇ ರೀತಿ ಇರುತ್ತದೆ. ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ನೋಯ್ಡಾದ ಖಾಸಗಿ ಕಂಪನಿಯೊಂದರ ವಿಡಿಯೋ ವೈರಲ್ ಆಗಿದೆ. ಇದು ಕೆಲಸದ ಸ್ಥಳದಲ್ಲಿ ನಾಯಕತ್ವ ಸ್ಥಾನಗಳಿಗೆ ಪುರುಷರು ಅಥವಾ ಮಹಿಳೆಯರು ಇಬ್ಬರಲ್ಲಿ ಯಾರು ಹೆಚ್ಚು ಸೂಕ್ತರು ಎಂಬ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.
ಪುರುಷರು ಅಥವಾ ಮಹಿಳೆಯ ಉದ್ಯೋಗಿಗಳೇ ಇರಲಿ, ಮ್ಯಾನೇಜರ್ ಯಾರಿರಬೇಕೆಂದು ಕೇಳಿದಾಗ ಪುರುಷರೇ ಮ್ಯಾನೇಜರ್ (female manager) ಇರಬೇಕೆಂದು ಬಯಸುತ್ತಾರೆ. ಹೌದು, ನೋಯ್ಡಾದ (Noida) ಖಾಸಗಿ ಕಂಪನಿಯೊಂದರ ಉದ್ಯೋಗಿಗಳ ಅಭಿಪ್ರಾಯವು ಅದೇ ಆಗಿದೆ. ಆದರೆ ಇದೀಗ ನೋಯ್ಡಾ ಮೂಲದ ‘ಕ್ಲೌಡ್ ಸೈನ್ಸ್ ಲ್ಯಾಬ್ಸ್’ ಕಂಪನಿಯ ಉದ್ಯೋಗಿಗಳ ಸಮೀಕ್ಷೆಯ ವಿಡಿಯೋ ಸದ್ಯ ವೈರಲ್ ಆಗಿದೆ. ಇಲ್ಲಿ ಪುರುಷ ಹಾಗೂ ಮಹಿಳಾ ಉದ್ಯೋಗಿಗಳು ಪುರುಷರೇ ಬಾಸ್ ಆಗಿ ಇರಬೇಕೆಂದು ಪ್ರಾಮಾಣಿಕ ಉತ್ತರ ನೀಡಿದ್ದಾರೆ. ಈ ವಿಡಿಯೋ ಸದ್ಯ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ನ್ಯೂಸ್ ಅಲ್ಗೆಬ್ರಾ (News algebra) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ತಮಾಷೆ ವಿಡಿಯೋ ಇದಾಗಿದೆ. ಈ ವಿಡಿಯೋಗೆ ನೋಯ್ಡಾದ ಖಾಸಗಿ ಕಂಪನಿಯ ಉದ್ಯೋಗಿಗಳು ಮಹಿಳಾ ಬಾಸ್‌ಗಳಿಗಿಂತ ಪುರುಷ ಬಾಸ್ ಗಳನ್ನೇ ಆಯ್ಕೆ ಮಾಡಿಕೊಂಡರು. “ಇದು ಅಥವಾ ಅದು” ಈ ಸಮೀಕ್ಷೆಯಲ್ಲಿ ಭಾಗವಹಿಸುವವರು ಎರಡು ಆಯ್ಕೆಗಳಲ್ಲಿ ಒಂದನ್ನು ಆರಿಸಬೇಕಾಗುತ್ತದೆ. ಆದರೆ ಆಶ್ಚರ್ಯಕರವಾಗಿ ಎಲ್ಲರೂ ಪುರುಷ ಮ್ಯಾನೇಜರ್ ರನ್ನೇ ಆಯ್ಕೆ ಮಾಡಿದರು. ಇದರಲ್ಲಿ ಮಹಿಳಾ ಉದ್ಯೋಗಿಗಳೂ ಸೇರಿದ್ದಾರೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ಈ ವಿಡಿಯೋದಲ್ಲಿ ಉದ್ಯೋಗಿಗಳಿಗೆ ಕಂಪನಿಯ ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಎರಡು ಆಯ್ಕೆಗಳನ್ನು ನೀಡಲಾಗಿದೆ. ಇದಕ್ಕೆ ಅನುಸಾರವಾಗಿ ಉದ್ಯೋಗಿಗಳು ತಮ್ಮ ಆಯ್ಕೆಯ ಮುಂದೆ ನಿಲ್ಲಬೇಕು. ಅದರಂತೆ ಆಫೀಸ್ ಟ್ರಿಪ್ – ಲಾಂಗ್ ವೀಕೆಂಡ್, ಅರ್ಲಿ ಲಾಗ್ ಇನ್, ಲೇಟ್ ಲಾಗ್ ಔಟ್, ವರ್ಕ್ ಫ್ರಮ್ ಹೋಮ್, ವರ್ಕ್ ಫ್ರಮ್ ಆಫೀಸ್ ಹೀಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಲಾಗಿದೆ. ಇದರಲ್ಲಿ ಒಂದು ಪ್ರಮುಖ ಪ್ರಶ್ನೆಯೆಂದರೆ ‘ನೀವು ಮಹಿಳಾ ಮ್ಯಾನೇಜರ್ ಬಯಸುತ್ತೀರಾ ಅಥವಾ ಪುರುಷ ಮ್ಯಾನೇಜರ್ ರನ್ನು ಬಯಸುತ್ತೀರಾ? ಎನ್ನುವುದಾಗಿದ್ದು, ಎಲ್ಲಾ ಉದ್ಯೋಗಿಗಳು ‘ಪುರುಷ ಮ್ಯಾನೇಜರ್’ ಆಯ್ಕೆಯನ್ನು ಆರಿಸಿಕೊಂಡಿರುವುದನ್ನು ಕಾಣಬಹುದು.
ಜನವರಿ 1 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಇದುವರೆಗೆ 3 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಪ್ರಸ್ತುತ ಮ್ಯಾನೇಜರ್ ಪುರುಷರೇ ಆಗಿರುವುದರಿಂದ ಈ ರೀತಿ ಆಯ್ಕೆ ಮಾಡಲಾಯಿತು ಎಂದು ಹೇಳಿದ್ದಾರೆ. ಇನ್ನೊಬ್ಬರು, ಕೆಲಸದ ಸ್ಥಳದಲ್ಲಿ ಆಳವಾಗಿ ಬೇರೂರಿರುವ ಪೂರ್ವಾಗ್ರಹಗಳ ಒಂದು ಗಮನಾರ್ಹ ಚಿತ್ರಣ – ಲಿಂಗ ಸಮಾನತೆ ಇನ್ನೂ ಹಲವು ಮೈಲಿಗಳಷ್ಟು ದೂರ ಸಾಗಬೇಕಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಮಹಿಳೆಯರು ಕೂಡ ಪುರುಷ ಬಾಸ್‌ಗಳನ್ನು ಆಯ್ಕೆ ಮಾಡುತ್ತಾರೆ. ಪಕ್ಷಪಾತವು ಆಳವಾಗಿ ಬೇರೂರಿದೆ ಎಂದಿದ್ದಾರೆ.












Comments