• Jan 02, 2026
  • NPN Log
    10 ದಿನ ಶುಗರ್ ಫ್ರೀ ಚಾಲೆಂಜ್: ಹೊಸವರ್ಷಕ್ಕೆ ಹೊಸ ಹೊಸ ಬಟ್ಟೆಗಳನ್ನು ಕೊಳ್ಳುವುದರ ಜೊತೆಗೆ ಆರೋಗ್ಯ ಕಾಪಾಡಲು 10 ದಿನ ಶುಗರ್ ಫ್ರೀ ಚಾಲೆಂಜ್ ಗೆ ಸಿದ್ದವಾಗಿ. ಇದನ್ನು ಸರಿಯಾಗಿ ಮಾಡಿದಲ್ಲಿ ನೀವು ನಂಬಲು ಸಾಧ್ಯವಾಗದ ಬದಲಾವಣೆಗಳು ನಿಮ್ಮ ದೇಹದಲ್ಲಿ ಕಂಡುಬರುತ್ತದೆ. ಮತ್ತೇಕೆ ತಡ ಹೊಸ ವರ್ಷದ ಹೊಸ್ತಿಲಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಚಾಲೆಂಜ್ ಅನ್ನು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳಿಸಿ ಅನಾರೋಗ್ಯದಿಂದ ದೂರವಾಗಿ ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳಿ. ಇತ್ತೀಚಿಗೆ ಶುಗರ್ (Sugar) ಫ್ರೀ ಚಾಲೆಂಜ್ ನಡೆಯುತ್ತಿದ್ದು ಇದು ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಲು, ತೂಕ ಇಳಿಸಿಕೊಳ್ಳಲು, ದೇಹದಲ್ಲಿರುವ ಶಕ್ತಿಯನ್ನು ಹೆಚ್ಚಿಸಲು ಮತ್ತು ಮಧುಮೇಹದಂತಹ ಸಮಸ್ಯೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಆದರೆ ಸಿಹಿ ತಿನ್ನುವ ಬಯಕೆ ಅಥವಾ ಹಂಬಲವನ್ನು ನಿಯಂತ್ರಿಸುವುದು ಮತ್ತು ಸಂಸ್ಕರಿಸಿದ ಆಹಾರಗಳಿಂದ ದೂರವಿರುವುದು ಅಷ್ಟು ಸುಲಭವಲ್ಲ, ಅದೊಂದು ಸವಾಲಾಗಿರುತ್ತದೆ. ಆದರೆ ಸಿಹಿ ತಿಂಡಿ ಸೇವನೆ ಮಾಡುವುದನ್ನು ಕಡಿಮೆ ಮಾಡುವ ಮೂಲಕ ಅಥವಾ ತ್ಯಜಿಸುವ ಮೂಲಕ ಒಬ್ಬ ವ್ಯಕ್ತಿ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಾಗಾದರೆ ಸಕ್ಕರೆಯ ಸೇವನೆ ಅಥವಾ ಸಿಹಿ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಿದ ನಂತರ ದೇಹದಲ್ಲಿ ಯಾವ ರೀತಿಯ ಬದಲಾವಣೆಗಳಾಗುತ್ತವೆ, ಈ ಬಗ್ಗೆ ತಜ್ಞರ ಅಭಿಪ್ರಾಯವೇನು ತಿಳಿದುಕೊಳ್ಳಿ. ಸಾಮಾನ್ಯವಾಗಿ ಹಣ್ಣು, ತರಕಾರಿ ಮತ್ತು ಡೈರಿ ಉತ್ಪನ್ನಗಳಂತಹ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುವ ಎಲ್ಲಾ ಆಹಾರಗಳಲ್ಲಿ ಸಕ್ಕರೆ ನೈಸರ್ಗಿಕವಾಗಿ ಕಂಡುಬರುತ್ತದೆ. ಈ ರೀತಿ ನೈಸರ್ಗಿಕವಾಗಿ ಕಂಡುಬರುವ ಸಿಹಿಅಂಶವಿರುವ ಆಹಾರವನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕವಲ್ಲ. ಆದರೆ ನಾವು ಸೇವಿಸುವ ಆಹಾರಗಳಿಗೆ ಹೆಚ್ಚಿನ ಸಕ್ಕರೆ ಸೇರಿಸುವುದರಿಂದ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ ಸಕ್ಕರೆ ಅಥವಾ ಸಿಹಿ ಸೇವನೆ ಮಾಡುವುದನ್ನು ಕಡಿಮೆ ಮಾಡುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆರಂಭದಲ್ಲಿ, ಒಮ್ಮೆಲೇ ಸಕ್ಕರೆ ಸೇವನೆಯನ್ನು ಕಡಿಮೆ ಮಾಡಿದಾಗ ಕೆಲವರಲ್ಲಿ ತಲೆನೋವು, ಆಯಾಸ ಅಥವಾ ಮಾನಸಿಕ ಬದಲಾವಣೆ ಅನುಭವಕ್ಕೆ ಬರುತ್ತದೆ, ಆದರೆ ಅಂತಿಮವಾಗಿ ಅಂದರೆ ದೀರ್ಘಾವಧಿಯಲ್ಲಿ ಉತ್ತಮ ಫಲಿತಾಂಶ ನೀಡುವುದರಲ್ಲಿ ಸಂಶಯವಿಲ್ಲ. ಸಕ್ಕರೆ ಸೇವನೆ ಮಾಡದಿದ್ದರೆ ಏನಾಗುತ್ತದೆ? 10 ದಿನ ಸಕ್ಕರೆ ಸೇವನೆ ಮಾಡುವುದನ್ನು ನಿಲ್ಲಿಸಿದರೆ ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡದ ಮಟ್ಟದಲ್ಲಿ ಬದಲಾವಣೆಗಳು ಉಂಟಾಗಬಹುದು ಎಂದು ತಜ್ಞರು ಹೇಳುತ್ತಾರೆ. ನಮ್ಮ ಜೀರ್ಣಾಂಗ ವ್ಯವಸ್ಥೆಯ ಆರೋಗ್ಯವು ಆರು ದಿನಗಳಲ್ಲಿ ಸುಧಾರಿಸಬಹುದು, ಮಾನಸಿಕ ಸ್ಥಿತಿ ಒಂದು ವಾರದೊಳಗೆ ಬದಲಾಗಬಹುದು ಮತ್ತು ಚರ್ಮವು ಹತ್ತು ದಿನಗಳಲ್ಲಿ ಕಾಂತಿಯುತವಾಗಿ ಕಾಣಬಹುದು ಎಂದು ಸಂಶೋಧನೆ ಹೇಳುತ್ತದೆ. ದೇಹದ ತೂಕದಲ್ಲಿನ ಬದಲಾವಣೆಗಳನ್ನು ಗಮನಿಸಲು ಕನಿಷ್ಠ ಒಂದು ತಿಂಗಳ ಕಾಲ ಸಕ್ಕರೆಯಿಂದ ದೂರವಿರುವುದರ ಜೊತೆಗೆ ಆರೋಗ್ಯಕರ ಆಹಾರವನ್ನು ಸೇವಿಸಬೇಕಾಗುತ್ತದೆ. ವಯಸ್ಕರು ದಿನಕ್ಕೆ 30 ಗ್ರಾಂ ಗಿಂತ ಹೆಚ್ಚು ಸಕ್ಕರೆಯನ್ನು ಸೇವಿಸಬಾರದು ಮತ್ತು ಎರಡರಿಂದ ಮೂರು ವರ್ಷ ವಯಸ್ಸಿನ ಮಕ್ಕಳು ದಿನಕ್ಕೆ 14 ಗ್ರಾಂ ಗಿಂತ ಹೆಚ್ಚು ಸಕ್ಕರೆಯನ್ನು ಸೇವಿಸಬಾರದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

    You Might Also Like

    Comments

    Leave A Comment

    Don’t worry ! Your email address will not be published. Required fields are marked (*).

    Get Newsletter

    Featured News

    Advertisement

    Voting Poll (Checkbox)

    Voting Poll (Radio)

    Readers Opinion