• Jan 02, 2026
  • NPN Log
    Sebi cancels licence of research analyst after finding he was running a grocery shop: ಸೆಬಿಯ ನೊಂದಾಯಿತ ರಿಸರ್ಚ್ ಅನಾಲಿಸ್ಟ್ ಆಗಿದ್ದ ಪುರೂಸ್​ಖಾನ್ ಎಂಬ ವ್ಯಕ್ತಿಯ ಲೈಸೆನ್ಸ್ ಅನ್ನು ಹಿಂಪಡೆಯಲಾಗಿದೆ. ಈತ ನೊಂದಾಯಿತ ಇಮೇಲ್​ನ ಪಾಸ್ವರ್ಡ್ ಅನ್ನು ಬೇರೊಬ್ಬರಿಗೆ ಕೊಟ್ಟಿದ್ದು, ಅದರಿಂದ ದುರ್ಬಳಕೆ ಆಗುತ್ತಿರುವುದು ಬೆಳಕಿಗೆ ಬಂದಿದೆ. ಆಪ್ಷನ್ಸ್ ರಿಸರ್ಚ್ ಕನ್ಸಲ್ಟೆನ್ಸಿ ಎನ್ನುವ ಬೋಗಸ್ ಕಂಪನಿ ಈತನ ರಿಜಿಸ್ಟ್ರೇಶನ್ ನಂಬರ್ ಬಳಸಿ ಹಲವರನ್ನು ಯಾಮಾರಿಸಿದೆ. ನವದೆಹಲಿ, ಜನವರಿ 1: ರಿಸರ್ಚ್ ಅನಾಲಿಸ್ಟ್ ಆಗಿ ಸೆಬಿಯಿಂದ ಲೈಸೆನ್ಸ್ (SEBI licence) ಪಡೆದ ವ್ಯಕ್ತಿಯೊಬ್ಬ ತನ್ನ ಇಮೇಲ್, ಪಾಸ್ವರ್ಡ್ ಅನ್ನು ಪರಿಚಿತನೊಬ್ಬನಿಗೆ ಕೊಟ್ಟು ಈಗ ಸಂಕಷ್ಟಕ್ಕೆ ಸಿಲುಕಿದ್ದಾನೆ. ಈತನ ರಿಜಿಸ್ಟ್ರೇಶನ್ ಅನ್ನು ದುರ್ಬಳಕೆ ಮಾಡಿಕೊಳ್ಳಲಾಗಿದ್ದು, ಇದರಿಂದ ಬಹಳ ಜನರಿಗೆ ಕೋಟ್ಯಂತರ ರೂ ನಷ್ಟವಾಗಿದೆ. ಸೆಬಿ ಈತನಿಗೆ ನೀಡಿದ್ದ ರಿಸರ್ಚ್ ಅನಾಲಿಸ್ಟ್ ಲೈಸೆನ್ಸ್ ಅನ್ನು ರದ್ದು ಮಾಡಿದೆ. ಕುತೂಹಲ ಎಂದರೆ, ತನ್ನ ರಿಜಿಸ್ಟ್ರೇಶನ್ ನಂಬರ್ ದುರ್ಬಳಕೆಯಾಗಿದ್ದರೂ ಅದರ ಅರಿವೇ ಇಲ್ಲದೆ ಪುರೂಸ್​ಖಾನ್ (Purooskhan) ಯಾವುದೋ ಸಣ್ಣ ದಿನಸಿ ಅಂಗಡಿ ವ್ಯಾಪಾರ ಮಾಡಿಕೊಂಡಿದ್ದಾನೆ. ಹಲವು ಹೂಡಿಕೆದಾರರಿಂದ ದೂರು ಪುರೂಸ್​ಖಾನ್ ಎಂಬುವವರ ರಿಜಿಸ್ಟ್ರೇಶನ್ ನಂಬರ್ ಅನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎನ್ನುವ ಹಲವು ದೂರುಗಳು ಸೆಬಿಗೆ ಬಂದಿತ್ತು. 2022ರ ಜೂನ್ ತಿಂಗಳಲ್ಲಿ ಮೊದಲಿಗೆ ಬಂದ ದೂರಿನಲ್ಲಿ ಆಪ್ಷನ್ಸ್ ರಿಸರ್ಚ್ ಎನ್ನುವ ವೆಬ್​ಸೈಟ್​ನಿಂದ ಸುಳ್ಳು ಭರವಸೆಗಳು ಬರುತ್ತಿವೆ ಎಂದು ಆರೋಪಿಸಲಾಗಿತ್ತು. ಸೆಬಿ ಸರ್ಟಿಫೈಡ್ ಎಂದು ಹೇಳಿಕೊಂಡು ಪುರೂಸ್​ಖಾನ್​ರ ರಿಜಿಸ್ಟ್ರೇಶನ್ ನಂಬರ್ ಹಾಕಿದ್ದ ಆ ವೆಬ್​ಸೈಟ್, ತಾನು ಹಣ ಡಬಲ್ ಮಾಡುವ ಸ್ಕೀಮ್, ಟ್ರೇಡಿಂಗ್ ಸ್ಟ್ರಾಟಿಜಿ ಮಾಡುವುದಾಗಿ ಭರವಸೆ ಕೊಟ್ಟಿತ್ತು. ತಮ್ಮಿಂದ 50,000 ರೂ ಶುಲ್ಕ ಪಡೆಯಲಾಯಿತು, ಹಾಗೂ ನಂತರದ ಟ್ರೇಡಿಂಗ್​ನಲ್ಲಿ 4 ಲಕ್ಷ ರೂನಷ್ಟು ನಷ್ಟ ಆಯಿತು ಎಂದು ಆ ಮೊದಲ ದೂರುದಾರರು ಆರೋಪಿಸಿದ್ದರು. ಸೆಬಿ ತನಿಖೆ ನಡೆಸಿದಾಗ ಒಂದು ಸಂಗತಿ ಗಮನಕ್ಕೆ ಬಂತು. ರಿಜಿಸ್ಟ್ರೇಶನ್ ನಂಬರ್ ಪುರೂಸ್​ಖಾನ್ ಅವರದ್ದಾದರೂ, ಗ್ರಾಹಕರಿಂದ ಪಡೆದ ಶುಲ್ಕದ ಹಣವನ್ನು ಆಪ್ಷನ್ಸ್ ರಿಸರ್ಚ್ ಕನ್ಸಲ್ಟೆನ್ಸಿ ಎನ್ನುವ ಕಂಪನಿಗೆ ಹೋಗುತ್ತಿತ್ತು. ಆ ಒಆರ್​ಸಿ ಯಾವುದೇ ರೀತಿಯಲ್ಲೂ ಸೆಬಿಯಲ್ಲಿ ನೊಂದಾಯಿತವಾಗಿರಲಿಲ್ಲ. ಇದು ಮೊದಲ ದೂರು ಬಂದಾಗ ನಡೆಸಿದ ತನಿಖೆಯಲ್ಲಿ ಗೊತ್ತಾದ ಸಂಗತಿ. 2023ರ ಫೆಬ್ರುವರಿಯಲ್ಲಿ ಎರಡನೇ ದೂರು ದಾಖಲಾಯಿತು. ಅಲ್ಲಿಯೂ ಕೂಡ ಓಆರ್​ಸಿ ವಿರುದ್ಧದ ದೂರೇ. ಈಗ ಸೆಬಿ ಹೆಚ್ಚು ಆಳವಾಗಿ ತನಿಖೆ ನಡೆಸಿತು. ಓಆರ್​ಸಿ ಹಾಗೂ ಅದರ ಪಾರ್ಟ್ನರ್ ಸಂಸ್ಥೆಗಳು ಸೆಬಿ ಲೈಸೆನ್ಸ್ ಹೊಂದಿಲ್ಲದಿರುವುದು ಹಾಗೂ ಬೇರೆ ಸೆಬಿ ನೊಂದಣಿ ಸಂಖ್ಯೆಯೊಂದನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಖಚಿತವಾಗಿತ್ತು. 30 ಕೋಟಿ ರೂ ಹಣವನ್ನು ಹೂಡಿಕೆದಾರರಿಗೆ ಮರಳಿಸಬೇಕೆಂದು ಆದೇಶಿಸಿ, ಒಆರ್​ಸಿಯನ್ನು ಎರಡು ವರ್ಷ ನಿಷೇಧಿಸಿತು. ಪುರೂಸ್​ಖಾನ್ ಕಥೆ ಇದು… ಸೆಬಿ ಇದೇ ವೇಳೆ ಪುರೂಸ್​ಖಾನ್ ಮೇಲೆ ತನಿಖೆ ನಡೆಸಿತು. ಈತ 2018ರಲ್ಲಿ ರಿಸರ್ಚ್ ಅನಾಲಿಸ್ಟ್ ಆಗಿ ಸೆಬಿಯಲ್ಲಿ ನೊಂದಾಯಿಸಿದರೂ, ಆ ಕಾಯಕ ಬಿಟ್ಟು ಸಣ್ಣ ದಿನಸಿ ಅಂಗಡಿ ಇಟ್ಟುಕೊಂಡಿರುವುದಾಗಿ ಹೇಳಿದ್ದಾನೆ. ಅಲ್ಲದೇ ಒಆರ್​ಸಿ ಜೊತೆ ಸಂಪರ್ಕ ಇರುವ ವ್ಯಕ್ತಿಯೊಬ್ಬನಿಗೆ ತಾನು ಸೆಬಿ ನೊಂದಾಯಿತ ಇಮೇಲ್ ಐಡಿಯ ಪಾಸ್ವರ್ಡ್ ಕೊಟ್ಟಿದ್ದಾಗಿ ಒಪ್ಪಿಕೊಂಡಿದ್ದಾನೆ. ಸೆಬಿ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಈತನ ಲೈಸೆನ್ಸ್ ಅನ್ನು ರದ್ದು ಮಾಡಿದೆ.

    You Might Also Like

    Comments

    Leave A Comment

    Don’t worry ! Your email address will not be published. Required fields are marked (*).

    Get Newsletter

    Featured News

    Advertisement

    Voting Poll (Checkbox)

    Voting Poll (Radio)

    Readers Opinion