• Jan 02, 2026
  • NPN Log
    Commercial LPG cylinder prices hiked in 2026 January: ಎಲ್​ಪಿಜಿ ದರ ಈ ವರ್ಷದ ಆರಂಭದಲ್ಲೇ ಏರಿಕೆಯಾಗಿದೆ. 19 ಕಿಲೋ ಕಮರ್ಷಿಯಲ್ ಗ್ಯಾಸ್ ಬೆಲೆ 111 ರೂ ಏರಿದೆ. 47.5 ಕಿಲೋ ಕಮರ್ಷಿಯಲ್ ಗ್ಯಾಸ್ ಬೆಲೆಯಲ್ಲಿ 274 ರೂ ಹೆಚ್ಚಳ ಆಗಿ, 4,407 ರೂ ತಲುಪಿದೆ. 14.2 ಕಿಲೋ ಮತ್ತು 5 ಕಿಲೋ ಗೃಹಬಳಕೆ ಗ್ಯಾಸ್ ಸಿಲಿಂಡರ್ ಬೆಲೆಗಳಲ್ಲಿ ಯಾವುದೇ ಏರಿಕೆ ಆಗಿಲ್ಲ. ನವದೆಹಲಿ, ಜನವರಿ 1: ಹೊಸ ವರ್ಷಕ್ಕೆ ಎಲ್​ಪಿಜಿ ಸಿಲಿಂಡರ್ ಬೆಲೆ (LPG) ಏರಿಕೆಯ ಶಾಕ್ ಸಿಕ್ಕಿದೆ. 2025ರಲ್ಲಿ 200 ರೂಗೂ ಹೆಚ್ಚು ಇಳಿಕೆ ಕಂಡಿದ್ದ ಕಮರ್ಷಿಯಲ್ ಎಲ್​ಪಿಜಿ ಗ್ಯಾಸ್ ಬೆಲೆ ಏರಿಕೆ ಆಗಿದೆ. ಆದರೆ, ಗೃಹಬಳಕೆ ಗ್ಯಾಸ್ ಬೆಲೆಯಲ್ಲಿ ಏರಿಕೆ ಆಗಿಲ್ಲ. 19 ಕಿಲೋ ಮತ್ತು 47.50 ಕಿಲೋ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್​ಗಳು ದುಬಾರಿಯಾಗಿವೆ. 19 ಕಿಲೋ ಎಲ್​ಪಿಜಿ ಸಿಲಿಂಡರ್ ಬೆಲೆ 110 ರೂನಿಂದ 112 ರೂನಷ್ಟು ಏರಿದೆ. ಬೆಂಗಳೂರಿನಲ್ಲಿ 110.50 ರೂ ಬೆಲೆ ಹೆಚ್ಚಳ ಆಗಿದೆ. ಇನ್ನು, 47.50 ಕಿಲೋ ತೂಕದ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 274.50 ರೂ ಏರಿಕೆ ಆಗಿದ್ದು, 4,407 ರೂ ಗಡಿ ಮುಟ್ಟಿದೆ. ಬೆಂಗಳೂರಿನಲ್ಲಿ 2026ರ ಜನವರಿಯಲ್ಲಿ ವಿವಿಧ ಎಲ್​ಪಿಜಿ ದರ 14.2 ಕಿಲೋ ಅಡುಗೆ ಅನಿಲ: 855.50 ರೂ 5 ಕಿಲೋ ಅಡುಗೆ ಅನಿಲ: 318.50 ರೂ 19 ಕಿಲೋ ವಾಣಿಜ್ಯ ಸಿಲಿಂಡರ್: 1,764.50 (110.50 ರೂ ಏರಿಕೆ) 47.5 ಕಿಲೋ ವಾಣಿಜ್ಯ ಸಿಲಿಂಡರ್: 4,407 ರೂ (274.50 ರೂ ಏರಿಕೆ) ಇದನ್ನೂ ಓದಿ: ಸಿಮ್ ವೆರಿಫಿಕೇಶನ್​ನಿಂದ ಹಿಡಿದು ಕ್ರೆಡಿಟ್ ಸ್ಕೋರ್​ವರೆಗೆ ಜನವರಿ 1ರಿಂದ ಆಗಲಿರುವ ಪ್ರಮುಖ ಹಣಕಾಸು ನಿಯಮ ಬದಲಾವಣೆಗಳು ಬಹಳ ತಿಂಗಳುಗಳಿಂದ ಗೃಹಬಳಕೆ ಎಲ್​ಪಿಜಿ ಸಿಲಿಂಡರ್ ಬೆಲೆ ಹೆಚ್ಚೇನೂ ಏರಿಕೆ ಆಗಿಲ್ಲ. 14.2 ಕಿಲೋ ಎಲ್​ಪಿಜಿ ಸಿಲಿಂಡರ್ ಬೆಲೆಯಲ್ಲಿ ಕಳೆದ 1-2 ವರ್ಷದಲ್ಲಿ ಹೆಚ್ಚಳ ಆಗಿರುವುದು ಸುಮಾರು 50 ರೂ ಮಾತ್ರವೇ. ದೇಶಾದ್ಯಂತ ವಿವಿಧ ನಗರಗಳಲ್ಲಿ 19 ಕಿಲೋ ಕಮರ್ಷಿಯಲ್ ಗ್ಯಾಸ್ ಬೆಲೆ (ಜ. 1ಕ್ಕೆ): ದೆಹಲಿ: 1,691.50 ರೂ ಕೋಲ್ಕತಾ: 1,684 ರೂ ಮುಂಬೈ: 1,642.50 ರೂ ಬೆಂಗಳೂರು: 1,764.60 ರೂ ಪಾಟ್ನಾ: 1,953 ರೂ ಲಕ್ನೋ: 1,814 ರೂ ಗುರುಗ್ರಾಮ್: 1,708.50 ರೂ ಭೋಪಾಲ್; 1,696 ರೂ ನೋಯ್ಡಾ: 1,691 ರೂ

    You Might Also Like

    Comments

    Leave A Comment

    Don’t worry ! Your email address will not be published. Required fields are marked (*).

    Get Newsletter

    Featured News

    Advertisement

    Voting Poll (Checkbox)

    Voting Poll (Radio)

    Readers Opinion