• Jan 02, 2026
  • NPN Log
    ಆಪ್ಟಿಕಲ್‌ ಇಲ್ಯೂಷನ್‌ನಂತಹ (optical illusion) ಚಿತ್ರಗಳು ಒಂದು ಕ್ಷಣ ನಿಮ್ಮ ಕಣ್ಣನ್ನೇ ಮೋಸಗೊಳಿಸುತ್ತವೆ. ಹೀಗಾಗಿ ಕೆಲವರು ಎಷ್ಟೇ ಪ್ರಯತ್ನ ಪಟ್ಟರೂ ಒಗಟು ಬಿಡಿಸಲು ಸಾಧ್ಯವಾಗಲ್ಲ. ಹೆಚ್ಚಿನವರು ಇಂತಹ ಒಗಟು ಬಿಡಿಸುವಾಗ ಸೋಲುತ್ತಾರೆ. ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವು ಸರಳವಾಗಿ ಕಂಡರೂ ಕಠಿಣವಾಗಿದೆ. ಈ ಪ್ರಕೃತಿ ನಡುವೆ ಎಷ್ಟು ಆಮೆಗಳಿವೆ ಎಂದು ಹೇಳಬೇಕು. ಈ ಒಗಟು ಬಿಡಿಸಲು ಇರುವ ಸಮಯಾವಕಾಶ 25 ಸೆಕೆಂಡುಗಳು ಮಾತ್ರ. ಹೀಗಾಗಿ ನಿಮ್ಮ ಬುದ್ಧಿವಂತಿಕೆಗೆ ಇಲ್ಲಿದೆ ಒಂದು ಚಾಲೆಂಜ್. ಮೆದುಳಿಗೆ ಕಸರತ್ತು ನೀಡುವ ಆಟಗಳು ಮತ್ತು ಸಂಕೀರ್ಣ ಒಗಟುಗಳನ್ನು ಪರಿಹರಿಸುವುದು ಅಷ್ಟು ಸುಲಭವಲ್ಲ. ಈ ಚಿತ್ರವು ಅಷ್ಟೇ ಕಠಿಣ ಸವಾಲಿನದ್ದಾಗಿದೆ. ನೀವಿಲ್ಲಿ ಸುಂದರವಾದ ಪ್ರಕೃತಿ ದೃಶ್ಯವನ್ನು ಕಾಣಬಹುದು. ನಿಮ್ಮ ಕಣ್ಣಿಗೆ ಒಂದು ದೊಡ್ಡ ಆಮೆ ಕಾಣಿಸುತ್ತಿರಬಹುದು. ಆದರೆ ಆ ಫೋಟೋದಲ್ಲಿ ಇನ್ನಷ್ಟು ಆಮೆಗಳಿವೆ. ನೀವು ಇಲ್ಲಿ ಒಟ್ಟು ಎಷ್ಟು ಆಮೆಗಳಿವೆ ಎಂದು ಕಂಡುಹಿಡಿಯಬೇಕು. ಕಣ್ಣು ಅಗಲಿಸಿ ಪ್ರತಿಯೊಂದು ಮೂಲೆಯನ್ನು ಪರೀಕ್ಷಿಸಿ ನಿಖರವಾದ ಉತ್ತರ ಹೇಳಲು ಪ್ರಯತ್ನಿಸಿ. ನಿಮ್ಮ ಕಣ್ಣಿಗೆ ಕಂಡ ಆಮೆಗಳೆಷ್ಟು? ಇಲ್ಯೂಷನ್ ಚಿತ್ರಗಳು ನಮ್ಮ ಕಣ್ಣಿಗೆ ಕಾಣುವುದು ಒಂದು, ಆದರೆ ಅದರಲ್ಲಿ ಅಡಗಿರುವುದು ಇನ್ನೊಂದು ಆಗಿರುತ್ತದೆ. ನೀವು ಎಷ್ಟೇ ಹುಡುಕಿದರೂ ಚಿತ್ರದಲ್ಲಿರುವ ಆಮೆಗಳೆಷ್ಟು ಎನ್ನುವುದನ್ನು ಹೇಳಲು ಸಾಧ್ಯವಾಗುತ್ತಿಲ್ಲವೇ. ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಈ ಚಿತ್ರದಲ್ಲಿ ಒಟ್ಟು 8 ಆಮೆಗಳಿವೆ. ಈ ಕೆಳಗಿನ ಚಿತ್ರದಲ್ಲಿ ಆಮೆಗಳನ್ನು ಗುರುತಿಸಿದ್ದೇವೆ.

    You Might Also Like

    Comments

    Leave A Comment

    Don’t worry ! Your email address will not be published. Required fields are marked (*).

    Get Newsletter

    Featured News

    Advertisement

    Voting Poll (Checkbox)

    Voting Poll (Radio)

    Readers Opinion