• Jan 02, 2026
  • NPN Log
    ಶ್ರೀನಗರ್, ಜನವರಿ 2: ಜಮ್ಮು ಮತ್ತು ಕಾಶ್ಮೀರ ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಆಟಗಾರನೊಬ್ಬ ಪ್ಯಾಲೆಸ್ಟೀನ್ ಧ್ವಜ ಹಾಕಿಕೊಂಡು ಆಡುವ ಮೂಲಕ ವಿವಾದ ಸೃಷ್ಟಿಸಿದ್ದಾನೆ. ಆ ಆಟಗಾರನ ಹೆಸರು ಫರ್ಖಾನ್ ಭಟ್ (Furqan Bhat). ಈತ ಜೆಕೆ11 ತಂಡದ ಆಟಗಾರ. ನಿನ್ನೆ ಗುರುವಾರ (ಜ. 1) ಜಮ್ಮು ಟ್ರೇಲ್​ಬ್ಲೇಜರ್ಸ್ ತಂಡದ ವಿರುದ್ಧದ ಪಂದ್ಯವೊಂದರಲ್ಲಿ ಬ್ಯಾಟಿಂಗ್ ಮಾಡುವಾಗ ಪ್ಯಾಲೆಸ್ಟೀನ್ ಬಾವುಟದ (Palestine flag) ಸ್ಟಿಕರ್ ಅಂಟಿಸಲಾದ ಹೆಲ್ಮೆಟ್ ಧರಿಸಿದ್ದು ಬೆಳಕಿಗೆ ಬಂದಿದೆ. ಪೂರ್ವಾನುಮತಿ ಇಲ್ಲದೇ ಇನ್ನೊಂದು ದೇಶದ ಬಾವುಟ ಧರಿಸುವುದು ನಿಯಮ ಬಾಹಿರ. ಜಮ್ಮು ಮತ್ತು ಕಾಶ್ಮೀರ ಗ್ರಾಮೀಣ ಪೊಲೀಸರು ಫರ್ಖಾನ್ ಭಟ್​ನನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಈ ಹಿಂದೆ ಭಾರತದ ಕೆಲವೆಡೆ ಜನರು ಪ್ಯಾಲೆಸ್ಟೀನ್​ಗೆ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆ, ಮೆರವಣಿಗೆ ಇತ್ಯಾದಿ ಮಾಡಿರುವುದುಂಟು. ಕ್ರಿಕೆಟಿಗ ಫರ್ಖಾನ್ ಭಟ್ ಅವರು ಪ್ಯಾಲೆಸ್ಟೀನ್ ಧ್ವಜವನ್ನು ಯಾವ ಕಾರಣಕ್ಕೆ ಹಾಕಿದ್ದರು ಎಂಬುದು ಗೊತ್ತಾಗಿಲ್ಲ. ಪ್ಯಾಲೆಸ್ಟೀನ್​ಗೆ ಬೆಂಬಲ ಸೂಚಕವಾಗಿ ಇದನ್ನು ಧರಿಸಿದ್ದರೋ, ಅಥವಾ ಇನ್ಯಾರದೋ ಒತ್ತಡಕ್ಕೆ ಇದನ್ನು ಧರಿಸಿದ್ದರೋ ಎಂಬ ವಿವರ ಗೊತ್ತಾಗಬೇಕಿದೆ. ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಸಂಸ್ಥೆಯ ಮೇಲೂ ದೃಷ್ಟಿ ಹಾಕಲಾಗಿದೆ. ಆದರೆ, ತನಗೂ ಈ ಟೂರ್ನಿಗೂ ಸಂಬಂಧ ಇಲ್ಲ. ಫರ್ಖಾನ್ ಭಟ್ ತಮ್ಮ ಅಸೋಸಿಯೇಶನ್​ನ ಸದಸ್ಯನೂ ಅಲ್ಲ ಎಂದು ಜೆಕೆಸಿಎ ಹೇಳಿದೆ. ಪ್ಯಾಲೆಸ್ಟೀನ್ ವಿಚಾರ ಭಾರತದ ರಾಜತಾಂತ್ರಿಕ ಸ್ಥಿತಿಗೆ ಸೂಕ್ಷ್ಮವಾಗಿದೆ. ಹೀಗಾಗಿ, ಭಾರತದೊಳಗೆ ಪ್ಯಾಲೆಸ್ಟೀನ್ ಪರವಾಗಿಯಾಗಲೀ, ವಿರೋಧವಾಗಿಯಾಗಲೀ ನಡೆಯುವ ಪ್ರತಿಭಟನೆಗಳ ಮೇಲೆ ನಿಗಾ ಇರಿಸಲಾಗುತ್ತದೆ.

    You Might Also Like

    Comments

    Leave A Comment

    Don’t worry ! Your email address will not be published. Required fields are marked (*).

    Get Newsletter

    Featured News

    Advertisement

    Voting Poll (Checkbox)

    Voting Poll (Radio)

    Readers Opinion