• Jan 02, 2026
  • NPN Log
    ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟನ (Gilli Nata) ಮೇಲೆ ರಕ್ಷಿತಾ ಶೆಟ್ಟಿಗೆ ವಿಶೇಷ ಒಲವು ಇದೆ. ಗಿಲ್ಲಿ ನಟ ಅವರಂತಹ ಹುಡುಗ ಬೇಕು ಎಂದು ಈ ಮೊದಲು ರಕ್ಷಿತಾ ಹೇಳಿಕೊಂಡಿದ್ದರು. ಈಗ ಗಿಲ್ಲಿ ನಟ ಅವರು ‘ಐ ಲವ್ ಯುವರ್ ಲೈಫ್’ ಎಂದು ಹಾಡು ಹೇಳಿದ್ದಾರೆ. ಇದನ್ನು ಕೇಳಿ ಕಾವ್ಯಾ ಶಾಕ್ ಆಗಿದ್ದಾರೆ. ರಕ್ಷಿತಾ ಏನು ಹೇಳುತ್ತಿದ್ದಾರೆ ಎಂಬುದನ್ನು ಅರ್ಥೈಸಿಕೊಳ್ಳಲು ಅವರಿಗೆ ಸ್ವಲ್ಪ ಸಮುಯವೇ ಬೇಕಾಯಿತು. ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ರಕ್ಷಿತಾ ಹಾಗೂ ಗಿಲ್ಲಿ ಇಬ್ಬರೂ ಭರ್ಜರಿ ಮನರಂಜನೆ ನೀಡುತ್ತಿದ್ದಾರೆ. ರಕ್ಷಿತಾ ಶೆಟ್ಟಿ ಆರಂಭದಲ್ಲಿ ಒಂದು ರೀತಿ ಇದ್ದರು. ಆದರೆ, ಈಗ ಅವರ ಆಟ ಸಂಪೂರ್ಣ ಬದಲಾಗಿದೆ. ಇತ್ತೀಚೆಗೆ ಮಾತನಾಡುವಾಗ ರಕ್ಷಿತಾ ಶೆಟ್ಟಿ ಅವರು, ‘ನನಗೆ ಗಿಲ್ಲಿ ರೀತಿಯ ಹುಡುಗ ಬೇಕು’ ಎಂದು ಹೇಳಿದ್ದರು. ಇದು ಚರ್ಚೆಗೆ ಕಾರಣ ಆಗಿತ್ತು. ಗಿಲ್ಲಿ ರೀತಿಯ ಹುಡುಗನೇ ಬೇಕು ಎಂದು ರಕ್ಷಿತಾ ಶೆಟ್ಟಿ ಹೇಳಲು ಒಂದು ಕಾರಣವೂ ಇತ್ತು. ರಕ್ಷಿತಾ ಶೆಟ್ಟಿ ಅವರಿಗೆ ಕೀಟಲೆ ಮಾಡೋ ಹುಡುಗ ಎಂದರೆ ತುಂಬಾನೇ ಇಷ್ಟವಂತೆ. ಗಿಲ್ಲಿ ಇಡೀ ದಿನ ಮನೆಯಲ್ಲಿ ಕೀಟಲೆ ಮಾಡುತ್ತಾ ಇರುತ್ತಾರೆ. ಇದು ಅವರಿಗೆ ಸಖತ್ ಇಷ್ಟ ಆಗಿದೆ. ಈಗ ಗಿಲ್ಲಿ ಜೀವನವನ್ನು ಇಷ್ಟಪಡುತ್ತೇನೆ ಎಂದು ರಕ್ಷಿತಾ ಹೇಳಿಕೊಂಡಿದ್ದಾರೆ. ಹೊಸ ವರ್ಷದ ಸಂದರ್ಭದಲ್ಲಿ ಎಲ್ಲರೂ ಡ್ಯಾನ್ಸ್ ಮಾಡುತ್ತಿದ್ದರು. ಈ ವೇಳೆ ರಕ್ಷಿತಾ ಶೆಟ್ಟಿ ಅವರು, ‘ಐ ಲವ್ ಯುವರ್ ಲೈಫ್’ ಎಂದು ಗಿಲ್ಲಿ ಬಳಿ ಹಾಡು ಹೇಳಿದ್ದಾರೆ. ಇದನ್ನು ಕೇಳಿ ಕಾವ್ಯಾ ಶಾಕ್ ಆದರು. ರಾಶಿಕಾ ಎಕ್ಸ್​​ಪ್ರೆಷನ್ ಬದಲಾಗಿದೆ.

    You Might Also Like

    Comments

    Leave A Comment

    Don’t worry ! Your email address will not be published. Required fields are marked (*).

    Get Newsletter

    Featured News

    Advertisement

    Voting Poll (Checkbox)

    Voting Poll (Radio)

    Readers Opinion