• Jan 02, 2026
  • NPN Log
    ಲಿಫ್ಟ್​ ಕೊಡುವುದಾಗಿ ಹತ್ತಿಕೊಂಡು ಕಾರಿನಲ್ಲೇ ಇಬ್ಬರು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಫರೀದಾಬಾದಿನಲ್ಲಿ ನಡೆದಿದೆ. ದೂರಿನ ನಂತರ ಪೊಲೀಸರು ಕ್ರಮ ಕೈಗೊಂಡಿದ್ದು, ಇಬ್ಬರನ್ನು ಬಂಧಿಸಲಾಗಿದೆ. ಪ್ರಕರಣದ ತನಿಖೆ ಆರಂಭಿಸಲಾಗಿದೆ. ವರದಿಗಳ ಪ್ರಕಾರ, ಮಹಿಳೆಯ ಕುಟುಂಬವು ಡಿ. 30 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಪೊಲೀಸರಿಗೆ ದೂರು ನೀಡಿದೆ. ದೂರಿನ ಪ್ರಕಾರ, ಮಹಿಳೆ ತನ್ನ ಪತಿಯಿಂದ ಬೇರ್ಪಟ್ಟ ನಂತರ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದಳು. ಫರೀದಾಬಾದ್, ಡಿಸೆಂಬರ್ 31: ಲಿಫ್ಟ್​ ಕೊಡುವುದಾಗಿ ಹತ್ತಿಸಿಕೊಂಡು ಕಾರಿನಲ್ಲೇ ಮಹಿಳೆಯ ಮೇಲೆ ಇಬ್ಬರು ಸಾಮೂಹಿಕ ಅತ್ಯಾಚಾರ(Rape)ವೆಸಗಿರುವ ಘಟನೆ ಫರೀದಾಬಾದಿನಲ್ಲಿ ಡಿ.29ರಂದು ರಾತ್ರಿ ನಡೆದಿದೆ. ದೂರಿನ ನಂತರ ಪೊಲೀಸರು ಕ್ರಮ ಕೈಗೊಂಡಿದ್ದು, ಇಬ್ಬರನ್ನು ಬಂಧಿಸಲಾಗಿದೆ. ಪ್ರಕರಣದ ತನಿಖೆ ಆರಂಭಿಸಲಾಗಿದೆ. ವರದಿಗಳ ಪ್ರಕಾರ, ಮಹಿಳೆಯ ಕುಟುಂಬವು ಡಿ. 30 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಪೊಲೀಸರಿಗೆ ದೂರು ನೀಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ದೂರಿನ ಪ್ರಕಾರ, ಮಹಿಳೆ ತನ್ನ ಪತಿಯಿಂದ ಬೇರ್ಪಟ್ಟ ನಂತರ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದಳು. ಡಿಸೆಂಬರ್ 29 ರ ರಾತ್ರಿ, ರಾತ್ರಿ 8.30 ರ ಸುಮಾರಿಗೆ, ತನ್ನ ತಾಯಿಯೊಂದಿಗೆ ಜಗಳವಾಡಿ ನಂತರ ಮಹಿಳಾ ಸ್ನೇಹಿತೆಯನ್ನು ಭೇಟಿ ಮಾಡಲು ಮನೆಯಿಂದ ಹೊರಟಿದ್ದಳು. ರಾತ್ರಿ 12.30 ರ ಸುಮಾರಿಗೆ, ಆಕೆ ಮನೆಗೆ ಹಿಂತಿರುಗಲು ಮೆಟ್ರೋ ಚೌಕ್ ಬಳಿ ಆಟೋ ಚಾಲಕರೊಂದಿಗೆ ಮಾತನಾಡುತ್ತಿದ್ದಳು. ಈ ಸಮಯದಲ್ಲಿ, ವ್ಯಾನ್ ಬಂದು ಆಕೆಗೆ ಲಿಫ್ಟ್​ ಕೊಡುವುದಾಗಿ ಹೇಳಿ ಹತ್ತಿಸಿಕೊಂಡಿದ್ದರು. ಆರೋಪಿಯು ಮಹಿಳೆಯನ್ನು ಗುರುಗ್ರಾಮದ ಕಡೆಗೆ ಕರೆದೊಯ್ದು ಕಾಡಿನ ಪ್ರದೇಶದಲ್ಲಿ ಅಪರಾಧ ಎಸಗಿದ್ದಾನೆ ಎಂದು ವರದಿಯಾಗಿದೆ. ಸಂತ್ರಸ್ತೆಯ ತಲೆಗೆ ಗಂಭೀರ ಗಾಯಗಳಾಗಿದ್ದು, 12 ಹೊಲಿಗೆಗಳನ್ನು ಹಾಕಲಾಗಿದೆ. ದೂರು ನೀಡಿದ ಕೂಡಲೇ ಎಫ್‌ಐಆರ್ ದಾಖಲಿಸಲಾಗಿದ್ದು, ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರೂ ಶಂಕಿತರು ಫರಿದಾಬಾದ್ ನಿವಾಸಿಗಳು ಎಂದು ಪೊಲೀಸರು ಹೇಳಿದ್ದಾರೆ.

    You Might Also Like

    Comments

    Leave A Comment

    Don’t worry ! Your email address will not be published. Required fields are marked (*).

    Get Newsletter

    Featured News

    Advertisement

    Voting Poll (Checkbox)

    Voting Poll (Radio)

    Readers Opinion